ಇತ್ತೀಚಿನ ಸುದ್ದಿ
ದೆಹಲಿ ತಲುಪಿದ ಸಿಎಂ ಯಡಿಯೂರಪ್ಪ:ಸಚಿವ ಸ್ಥಾನಕ್ಕೆ ರೇಣುಕಾಚಾರ್ಯ ಕಸರತ್ತು
September 17, 2020, 6:07 PM

ನವದೆಹಲಿ(reporterkarnataka news): ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿ ತಲುಪಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಕಸರತ್ತು ಆರಂಭವಾಗಿದೆ.
ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕ ರೇಣುಕಾಚಾರ್ಯ ಇದೀಗ ದೆಹಲಿ ತಲುಪಿದ್ದಾರೆ.

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಬೇಕು ಎಂಬುವುದು ಮುಖ್ಯಮಂತ್ರಿ ಅವರ ಪರಮಾಧಿಕಾರ ಎಂದು ರೇಣುಕಾಚಾರ್ಯ ಹೇಳಿಕೊಂಡಿದ್ದಾರೆ. ಆದರೆ ಅವರು ದೆಹಲಿಯಲ್ಲಿ ಬಿ. ಎಲ್. ಸಂತೋಷ್ ಸೇರಿದಂತೆ ಹಲವು ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ.
ಈ ಮಧ್ಯೆ ದೆಹಲಿ ತಲುಪಿರುವ ಯಡಿಯೂರಪ್ಪ ಪಕ್ಷದ ಹಿರಿಯ ನಾಯಕರ ಜತೆ ಮಾತುಕತೆ ನಡೆಸಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುವ ಸಾಧ್ಯತೆಗಳಿವೆ.