12:56 AM Wednesday21 - October 2020
ಬ್ರೇಕಿಂಗ್ ನ್ಯೂಸ್

ಇತ್ತೀಚಿನ ಸುದ್ದಿ

ದೀಪಿಕಾಳ ಕುರಿತಂತೆ ಕಂಗಣಾಗೆ ಸ್ಯಾಂಡಲ್ ವುಡ್ ಕ್ವೀನ್ ನೀಡಿದ ಸಲಹೆ ಏನು?

September 19, 2020, 9:06 AM

ಬೆಂಗಳೂರು(reporterkarnataka news): ಬಾಲಿವುಡ್ ಹಾಗೂ ನಟಿ ಕಂಗನಾ ರಣಾವತ್ ನಡುವಿನ ವಿವಾದಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರವೇಶ ಮಾಡಿದ್ದಾರೆ. ಡ್ರಗ್ಸ್ ಕುರಿತು ಕಂಗಣಾ ಅವರ ಕಾಳಜಿಯನ್ನು ಗಮನಿಸಿದ ರಮ್ಯಾಅವರಿಗೆ ಸಲಹೆಯೊಂದನ್ನು ಮಾಡಿದ್ದಾರೆ. 

ಕನ್ನಡ ಮೂಲದ ನಟಿಯಾದ ದೀಪಿಕಾ ಪಡುಕೋಣೆ ಅವರನ್ನು  ಉದಾಹರಣೆಯಾಗಿ ಕೊಟ್ಟು, ಅವರಿಂದ ಕಲಿಯೋದು ಬಹಳಷ್ಟಿದೆ ಅಂತ ಕಂಗನಾಗೆ ಕುಟುಕಿದ್ದಾರೆ. 

ದೀಪಿಕಾ ಅವರು ಮಾನಸಿಕ ಆರೋಗ್ಯದ ಕುರಿತು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ವೈಯಕ್ತಿಕವಾಗಿ ಉಂಟಾಗಿದ್ದ ಖಿನ್ನತೆ ಬಗ್ಗೆ ಮಾತನಾಡಿದ್ದರು. ಖಿನ್ನತೆಯಿಂದ ಬಳಲುತ್ತಿರುವ ಲಕ್ಷಾಂತರ ಮಂದಿಗೆ ನೆರವಾಗಲು ಸಂಸ್ಥೆಯೊಂದನ್ನು ಮಾಡಿದ್ದಾರೆ. ಅವರಿಂದ ಕಲಿಯಬೇಕಾದ್ದು ನೀವು ಸಾಕಷ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ.

ನಿಮಗೆ ಮಾದಕ ವ್ಯಸನದ ಬಗ್ಗೆ ನಿಜಕ್ಕೂ ಏನಾದ್ರೂ ಮಾಡಬೇಕು ಅಂತಿದ್ರೆ ಡ್ರಗ್ ವಿರೋಧಿ ಹೋರಾಟ ಮಾಡಿ. ವಿಡಿಯೋವೊಂದರಲ್ಲಿ ನೀವು, ಡ್ರಗ್ ಅಡಿಕ್ಟ್ ಆಗಿದ್ದ ಬಗ್ಗೆ ಹೇಳಿದ್ರಿ. ಈ ಮೂಲಕ ದಿಟ್ಟತನ ತೋರಿದ್ದೀರಿ. ನಿಮ್ಮ ಅನುಭವಗಳ ಬಗ್ಗೆ ಹಂಚಿಕೊಳ್ಳಿ,

ನೀವು ಹೇಗೆ ವ್ಯಸನದಿಂದ ಹೊರಬಂದ್ರಿ ಅನ್ನೋದನ್ನ ತಿಳಿಸಿ. ಡ್ರಗ್ಸ್ ಯಾಕೆ ಕೆಟ್ಟದ್ದು ಅನ್ನೋದರ ಬಗ್ಗೆ ಮಾತಾಡಿ. ಸಂಜಯ್ ದತ್  ಈಗಾಗಲೇ ಆ ಕೆಲಸವನ್ನ ಮಾಡಿದ್ದಾರೆ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು