ಇತ್ತೀಚಿನ ಸುದ್ದಿ
ದೀಪಿಕಾ ಪಡುಕೋಣೆ ಜತೆ ವಿಚಾರಣೆಗೆ ಹಾಜರಾಗಲು ರಣವೀರ್ ಕೋರಿಕೆ
September 25, 2020, 1:11 PM

ಮುಂಬೈ(reporterkarnataka news): ಮಾದಕ ದ್ರವ್ಯ ಜಾಲದ ತನಿಖೆ ನಡೆಸುತ್ತಿರುವ ಎನ್ ಸಿ ಬಿ ಇದೀಗ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರಿಗೆ ನೋಟಿಸ್ ಜಾರಿ ಮಾಡಿದೆ. ನಾಳೆ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ. ಈ ಸಂದರ್ಭದಲ್ಲಿ ತನಿಖಾಧಿಕಾರಿಗಳಿಗೆ ಹೊಸ ತಲೆ ನೋವು ಆರಂಭವಾಗಿದೆ.
ನಟಿ ದೀಪಿಕಾ ಅವರ ವಿಚಾರಣೆ ಸಂದರ್ಭದಲ್ಲಿ ಅಲ್ಲಿ ಇರಲು ನನಗೂ ಅನುಮತಿ ನೀಡಿ ಎಂದು ಅವರ ಪತಿ ಹಾಗೂ ಖ್ಯಾತ ನಟ ರಣವೀರ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ. ದೀಪಿಕಾ ಅವರು ತುಂಬಾ ಭಯಭೀತರಾಗಿದ್ದಾರೆ. ನಾನು ಅವರ ಜತೆ ಇದ್ದರೆ ಅವರು ಧೈರ್ಯದಿಂದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಎಂದು ರಣವೀರ್ ಸಿಂಗ್ ಹೇಳಿದ್ದಾರೆ.
ಈ ಮನವಿಗೆ ಎನ್ ಸಿ ಬಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.