3:52 PM Saturday28 - November 2020
ಬ್ರೇಕಿಂಗ್ ನ್ಯೂಸ್
ಕಲ್ಲಿದ್ದಲು ಮಾಫಿಯಾ: ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಸಿಬಿಐ ದಾಳಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 86 ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಶ ಕಂದಾಯ ಸಚಿವ ಆರ್. ಅಶೋಕ್ ದೆಹಲಿಯಲ್ಲಿ ರೈಲ್ವೆ ಸಚಿವರ ಭೇಟಿ  ಕೊರೊನಾ ಲಸಿಕೆ ಅಭಿವೃದ್ಧಿ: ಇಂದು ಸಂಶೋಧನಾ ಸಂಸ್ಥೆಗಳಿಗೆ ಪ್ರಧಾನಿ ಮೋದಿ ಭೇಟಿ ಮೆಹಬೂಬ ಮುಫ್ತಿ ಗೃಹಬಂಧನದಲ್ಲಿ ಇಲ್ಲ:  ಜಮ್ಮು- ಕಾಶ್ಮೀರ ಸರಕಾರ ಸ್ಪಷ್ಟನೆ ಆತ್ಮಹತ್ಯೆಗೆ ಯತ್ನಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಗೆ ಮುಂದುವರಿದ ಚಿಕಿತ್ಸೆ ರಾಜಕೀಯ ಒತ್ತಡದಿಂದ ಸಂತೋಷ್ ಆತ್ಮಹತ್ಯೆಗೆ ಯತ್ನ: ಪತ್ನಿ ಜಾಹ್ನವಿ ಆರೋಪ ಉಗ್ರ ಸಂಘಟನೆ ಪರ ಗೋಡೆ ಬರಹದ ತನಿಖೆಗೆ ಪ್ರತ್ಯೇಕ ತಂಡ ರಚನೆ: ಪೊಲೀಸ್ ಯಕ್ಷಗಾನ ದೇವ ಪರಂಪರೆಯ ಮೂಲ ಕಲೆಯಾಗಿದ್ದು ಅಧ್ಯಯನ ಅಗತ್ಯ: ನಿತ್ಯಾನಂದ  ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ

ಇತ್ತೀಚಿನ ಸುದ್ದಿ

ದೀಪಿಕಾ ಪಡುಕೋಣೆಗೆ ಎನ್ ಸಿಬಿ  ಸಮನ್ಸ್: 25ರಂದು ಹಾಜರಾಗಲು ಸೂಚನೆ

September 23, 2020, 10:16 PM

ಮುಂಬೈ(reporterkarnataka news):  ಮಾದಕ ದ್ರವ್ಯದ ತನಿಖೆ ನಡೆಸುತ್ತಿರುವ  ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಎನ್ ಸಿ ಬಿ ಮುಂದೆ ಸೆಪ್ಟೆಂಬರ್ 25ರಂದು ಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಜರಾಗಲಿದ್ದಾರೆ. ಈ ಸಂಬಂಧ ಎನ್ ಸಿ ಬಿ ಸಮನ್ಸ್ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ದೀಪಿಕಾ ಅವರ ಜತೆಗೆ ನಟಿಯರಾದ ಸಾರಾ ಆಲಿ ಖಾನ್, ಶ್ರದ್ಧಾ ಕಪೂರ್ ಮತ್ತು ರಾಕೂಲ್  ಪ್ರೀತ್ ಸಿಂಗ್ ಅವರಿಗೂ ಕೂಡ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಸೆಪ್ಟೆಂಬರ್ 24ರಿಂದ 26 ಮಧ್ಯೆ ಎಲ್ಲ ನಟಿಯರನ್ನು ವಿಚಾರಣೆಗೆ ಗುರಿಪಡಿಸಲು ನಿರ್ಧರಿಸಲಾಗಿದೆ.

ಪ್ಯಾಷನ್ ಡಿಸೈನರ್  ಸಿಮೋನ್ ಕಂಬಾಟ ಅವರಿಗೂ ಎನ್ ಸಿ ಬಿ  ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಈ ಬೆಳವಣಿಗೆ ಬಾಲಿವುಡ್ ನಲ್ಲಿ  ಭಾರೀ ಸಂಚಲನ ಮೂಡಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು