ಇತ್ತೀಚಿನ ಸುದ್ದಿ
ದೀಪಾವಳಿ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಟ್ರಂಪ್: ದೀಪ ಬೆಳಗಿಸುವ ಫೋಟೋ ಶೇರ್
November 14, 2020, 11:51 PM

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೀಪಾವಳಿಯ ಶುಭಾಶಯ ಕೋರಿದ್ದಾರೆ. ಈ ಸಂಬಂಧ ತಮ್ಮ ಟ್ವಿಟರ್ ಖಾತೆಯಲ್ಲಿ ದೀಪ ಬೆಳಗಿಸುವ ಪೋಟೋವನ್ನು ಅವರು ಶೇರ್ ಮಾಡಿದ್ದಾರೆ.
ಇದೇ ವೇಳೆ ಕೊರೋನಾ ಲಸಿಕೆ ಕುರಿತು ಕೂಡ ಟ್ರಂಪ್ ಮಾತನಾಡಿದ್ದಾರೆ. ಅವಧಿಗೆ ಮುನ್ನ ಕೊರೋನಾ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಹಲವು ರಾಜ್ಯಗಳು ಇದರ ಪರೀಕ್ಷೆಗೆ ಉತ್ಸುಕತೆ ತೋರಿಸಿವೆ. ಆದರೆ ನ್ಯೂಯಾರ್ಕ್ ಗವರ್ನರ್ ಮಾತ್ರ ಅಪಸ್ವರ ಎತ್ತಿದ್ದಾರೆ ಎಂದು ಟ್ರಂಪ್ ಟೀಕಿಸಿದ್ದಾರೆ.