1:12 PM Thursday28 - January 2021
ಬ್ರೇಕಿಂಗ್ ನ್ಯೂಸ್
ರಾಜ್ಯ ವಿಧಾನ ಮಂಡಲ ಅಧಿವೇಶನ ಇಂದಿನಿಂದ ಆರಂಭ: ರಾಜ್ಯಪಾಲರ ಭಾಷಣ ಬಂಧನ ಭೀತಿಯಿಂದ ಸಿಎಂ ಯಡಿಯೂರಪ್ಪ, ನಿರಾಣಿ ಬಚಾವ್: ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು… ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾದ ಡಾ. ಬಿ.ಎಂ. ಹೆಗ್ಡೆ ಅವರಿಗೆ ಸಂಸದ ನಳಿನ್, ಶಾಸಕ ಕಾಮತ್… ಖ್ಯಾತ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲು: ಪುನಃ ಕಾಣಿಸಿಕೊಂಡ ಎದೆನೋವು ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೀಡಾದ ಜಯಲಲಿತಾ ಆಪ್ತೆ ಶಶಿಕಲಾ ಇಂದು ಜೈಲಿನಿಂದ ಬಿಡುಗಡೆ  ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ ಜಾನಪದ ಕ್ರೀಡೆ ಕಂಬಳ ಜನವರಿ ಅಂತ್ಯದಿಂದ ಪ್ರಾರಂಭ: ಸಂಸದ ನಳಿನ್ ಕುಮಾರ್ ಕಟೀಲ್ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ…

ಇತ್ತೀಚಿನ ಸುದ್ದಿ

ಧರ್ಮಸ್ಥಳದಲ್ಲಿ ಇಂದಿನಿಂದ 5 ದಿನಗಳ ಕಾಲ ಲಕ್ಷದೀಪೋತ್ಸವ ಸಂಭ್ರಮ, ಸರ್ವಧರ್ಮ ಸಮ್ಮೇಳನ

December 10, 2020, 7:54 AM

ಧರ್ಮಸ್ಥಳ(reporterkarnataka news): ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ ಡಿಸೆಂಬರ್ 10ರಿಂದ 14ರ ವರೆಗೆ 5 ದಿನಗಳ ಕಾಲ ಭಕ್ತಿ ಸಡಗರದಲ್ಲಿ ನಡೆಯಲಿದೆ.

ಲಕ್ಷದೀಪೋತ್ಸವದ ವೇಳೆ ಮಂಜುನಾಥನ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನಗಳು ನಡೆಯಲಿದೆ. 88ನೇ ಸರ್ವಧರ್ಮ ಸಮ್ಮೇಳನ ಡಿ. 13 ಮತ್ತು 14ರಂದು ನಡೆಯಲಿದೆ.

ಇಲ್ಲಿನ ಲಕ್ಷದೀಪೋತ್ಸವಕ್ಕೆ ಸಾಂಪ್ರದಾಯಿಕ ಮಹತ್ವವಿದೆ. ಈ ಸಂದರ್ಭದಲ್ಲಿ ದೇವಳದ ಪ್ರತಿ ಪಾರ್ಶ್ವದಿಂದ ಇಡೀ ದೇವಾಲಯವನ್ನು ಶುದ್ಧೀಕರಿಸಿ, ಬಣ್ಣ ಬಳಿದು ಸುಸ್ಥಿತಿಗೆ ತರುವ ಕೆಲಸ ಕಳೆದ 150 ವರ್ಷಗಳಿಂದ ನಡೆದು ಬರುತ್ತಿದೆ. ದೇಗುಲದ ಮಹಾದ್ವಾರದಿಂದ ಆರಂಭಗೊಂಡು ದೇವಸ್ಥಾನ ಹಾಗೂ ಸುತ್ತಮುತ್ತಲಿನ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ.

ಲಕ್ಷದೀಪೋತ್ಸವದ ವಿಶೇಷವೆಂದರೆ ದೇವರೇ ಭಕ್ತರ ಬಳಿ ಬರುತ್ತಾರೆ. ಉಳಿದ ಸಂದರ್ಭದಲ್ಲಿ ಭಕ್ತರು ದೇವರ ಬಳಿ ತೆರಳುತ್ತಾರೆ. ಹೊಸಕಟ್ಟೆ ಉತ್ಸವ, ಕೆರೆಕಟ್ಟೆ, ಉದ್ಯಾನೋತ್ಸವ, ಕಂಜಿಮಾರು ಕಟ್ಟೆ, ಗೌರಿಮಾರು ಕಟ್ಟೆ ಉತ್ಸವ ನಡೆಯುತ್ತದೆ. 5 ದಿನಗಳಲ್ಲಿ 5 ಕಟ್ಟೆಗಳಿಗೆ ದೇವರು ತೆರಳುತ್ತಾರೆ.

ಲಕ್ಷ ದೀಪೋತ್ಸವದ ಕೊನೆಯ ದಿನ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಮವಸರಣ ಪೂಜೆ ನಡೆಯುತ್ತದೆ. ಇದೊಂದು ಅಪರೂಪದ ಆರಾಧನಾ ವಿಧಾನವಾಗಿದೆ. ಇದು ಧರ್ಮಸ್ಥಳದಲ್ಲಿ ಮಾತ್ರ ನಡೆಯುತ್ತದೆ. ದೀಪವೊಂದು ನೂರಾಗಿ, ಸಾವಿರವಾಗಿ, ಲಕ್ಷವಾಗಿ ಪಸರಿಸಿ ಅಜ್ಞಾನದ ಅಂಧಕಾರವನ್ನು ನಾಶ ಮಾಡಲಿ, ನಾಡಿನ ಜನತೆಗೆ ಸಮೃದ್ಧಿ ಮತ್ತು ಸಂತೃಪ್ತಿ ಉಂಟು ಮಾಡಲಿ ಎಂದು ಧರ್ಮಾಧಿಕಾರಿಗಳು ಡಾ. ಡಿ. ವೀರೇಂದ್ರ ಹೆಗ್ಗಡೆ ದೇವರಲ್ಲಿ ಪ್ರಾರ್ಥಿಸಿ ಪೂಜೆ ನೆರವೇರಿಸುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು