10:25 PM Thursday3 - December 2020
ಬ್ರೇಕಿಂಗ್ ನ್ಯೂಸ್
ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ತಡವೇಕೆ?: ಮಾಜಿ ಸಚಿವ ಖಾದರ್… ದೋಣಿ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ತಲಾ 6 ಲಕ್ಷ ರೂ. ಪರಿಹಾರ… ರೈತರ ಬೆಂಬಲಕ್ಕೆ ನಿಂತ ಅಕಾಲಿ ನಾಯಕ  ಬಾದಲ್ :  ಪದ್ಮವಿಭೂಷಣ ಪ್ರಶಸ್ತಿ ವಾಪಸ್ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕ ಜಯಂತಿ ಆಚರಣೆ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ: ಫುಡ್ ಡೆಲಿವರಿ ಬಾಯ್ ಪೊಲೀಸ್ ವಶಕ್ಕೆ ಪಿಎಫ್ಐ ಅಧ್ಯಕ್ಷರ ಎರಡೂ ನಿವಾಸಗಳ ಮೇಲೆ ಇಡಿ ದಾಳಿ: ಶೋಧ ಕಾರ್ಯ ಆರಂಭ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ: ಓರ್ವನ ವಿಚಾರಣೆ ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ರೈತ ಮುಖಂಡರೊಂದಿಗೆ ಇಂದು ಕೇಂದ್ರ ಸರಕಾರ ಚರ್ಚೆ: 35 ಸಂಘಟನೆಗಳಿಗೆ ಆಹ್ವಾನ

ಇತ್ತೀಚಿನ ಸುದ್ದಿ

ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ: ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಹೇಳಿದ್ದೇನು? 

September 19, 2020, 2:03 PM

ಮಂಗಳೂರು(reporterkarnataka news): ಮಾದಕ ದ್ರವ್ಯ ಜಾಲದ ತನಿಖೆ ಮಂಗಳೂರಿಗೆ ವಿಸ್ತರಿಸಿದೆ.  ಈ ಸಂಬಂಧ ಡ್ಯಾನ್ಸರ್ ಕಿಶೋರ್ ಶೆಟ್ಟಿಯನ್ನು  ಮಂಗಳೂರಿನಲ್ಲಿ ಬಂಧಿಸಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್  ಪತ್ರಿಕಾಗೋಷ್ಠಿಯಲ್ಲಿ ಅಧಿಕೃತವಾಗಿ ಇದನ್ನು ಪ್ರಕಟಿಸಿದ್ದಾರೆ.

 ಕಿಶೋರ್ ಶೆಟ್ಟಿ ಮಂಗಳೂರಿನಲ್ಲಿ ಇತ್ತೀಚೆಗೆ ಡ್ರಗ್ಸ್ ಪಾರ್ಟಿ ಆಯೋಜಿಸಿದ್ದ ಎಂದು ಕೂಡ ಆರೋಪಿಸಲಾಗಿದೆ. ಈ ಪಾರ್ಟಿಯಲ್ಲಿ ರಾಜ್ಯ ಮಟ್ಟದಲ್ಲಿ  ಹೆಸರುವಾಸಿಯಾಗಿರುವ ಆ್ಯಂಕರ್   ಒಬ್ಬರು ಕೂಡ ಭಾಗವಹಿಸಿದ್ದಳು ಎಂಬ ಆಘಾತಕಾರಿ ಮಾಹಿತಿ ಕೂಡ ಹೊರಬಿದ್ದಿದೆ.

ಕಿಶೋರ್ ಶೆಟ್ಟಿ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾನೆ. ಇದರಿಂದ ಈತನ ಸಂಬಂಧ ಮುಂಬೈಗೆ ಹರಡಿರುವ ಸಾಧ್ಯತೆ ಕೂಡ ಇದೆ. ಮುಖ್ಯವಾಗಿ ಹುಡುಗಿಯರಿಗೆ ಮಾದಕ ದ್ರವ್ಯ ನೀಡಿ ಅವರ ಜತೆ ಈತ ಪಾರ್ಟಿ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು