4:05 PM Thursday25 - February 2021
ಬ್ರೇಕಿಂಗ್ ನ್ಯೂಸ್
ಶ್ರೀನಿವಾಸಪುರ: ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿರ್ಮೂಲನೆ ಕಾರ್ಯಕ್ರಮ ರೋವರ್ ನಿಂದ ಮಂಗಳನ ಮಣ್ಣು ಹಾಗೂ ಕಲ್ಲಿನ  ಸ್ಯಾಂಪಲ್ ಸಂಗ್ರಹ: ಹಾಗಾದರೆ ಅದನ್ನು… ಕಟೀಲು ಮೇಳ ಸೇವೆ ಆಟಗಳು: ಎಲ್ಲಿ ಏನೇನು? ನೀವೇ ಓದಿ ನೋಡಿ ತಂಬಾಕು ಜಾಗೃತಿ ಮೂಡಿಸಲು ‘ಗುಲಾಬಿ ಅಭಿಯಾನ’:  ಬೆಳುವಾಯಿ ಶಾಲಾ ಮಕ್ಕಳಿಂದ ಜಾಥಾ ಪೇಜಾವರ ಶ್ರೀಗಳಿಗೆ ಗುರು ವಂದನೆ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ… ಆವಿಷ್ಕಾರ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಮಂಗಳೂರು ಅಭಿವೃದ್ಧಿ: ಡಿಸಿಎಂ ಡಾ. ಅಶ್ವಥನಾರಾಯಣ ಜನರು ಮಾಸ್ಕ್ ಧರಿಸದಿದ್ದರೆ ಮತ್ತೆ ಲಾಕ್ ಡೌನ್: ಮುಖ್ಯಮಂತ್ರಿ ನಾಗರಿಕರಿಗೆ ಎಚ್ಚರಿಕೆ ಕೊರೊನಾ ಭಯಕ್ಕೆ ಗಡಿಯಲ್ಲಿ ಹೈ ಅಲರ್ಟ್: ಕರ್ನಾಟಕ – ಮಹಾರಾಷ್ಟ್ರ ಗಡಿಗಳಲ್ಲಿ ಚೆಕ್… ವಿಜಯಪುರ ಹುಡ್ಗರ ಸಿನಿಮಾ ಕನಸು:’ ದಿ ಪ್ರಾಬ್ಲಮ್’  ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸರಕಾರಿ, ಬ್ಯಾಂಕಿಂಗ್ ಕೆಲಸ ಗಿಟ್ಟಿಸುವುದು ಈಗ ಬಹಳ ಸುಲಭ: ಶ್ಲಾಘ್ಯ ಸಂಸ್ಥೆ ಸಂಪರ್ಕಿಸಿ!

ಇತ್ತೀಚಿನ ಸುದ್ದಿ

ದಕ್ಷಿಣ ಕನ್ನಡ – ಕೇರಳದ 5 ಗಡಿಗಳು ಪಾಸ್ ರಹಿತ ವಾಹನ ಸಂಚಾರಕ್ಕೆ ಕೊನೆಗೂ ಮುಕ್ತ

August 27, 2020, 6:38 AM

ಮಂಗಳೂರು(reporterkarnataka news):

ಅಂತಾರಾಜ್ಯ ಪ್ರಯಾಣ ಕುರಿತ ಕೇರಳ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ ಬೆನ್ನಿಗೆ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಹಂಚಿಕೊಂಡಿರುವ ಐದು ಗಡಿಗಳನ್ನು ವಾಹನ ಸಂಚಾರಕ್ಕೆ ತೆರೆಯಲಾಗಿದೆ.

ತೊಕ್ಕೊಟ್ಟು ಸಮೀಪದ ತಲಪಾಡಿ ರಾಷ್ಟ್ರೀಯ ಹೆದ್ದಾರಿಯ ಚೆಕ್ ಪೋಸ್ಟ್ ಸೇರಿದಂತೆ ಪಾಣತ್ತೂರು, ಮಾಣಿಮೂಲೆ, ಪೆರ್ಲ(ಸಾರಡ್ಕ), ಈಶ್ವರಮಂಗಲ ಹಾಗೂ ಜಾಲ್ಸೂರು ಮಾರ್ಗಗಳ ಮೂಲಕ ಪಾಸ್ ರಹಿತವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಚಾರಕ್ಕೆ ಕಾಸರಗೋಡು ಜಿಲ್ಲಾಡಳಿತ ಅನುಮತಿ ಕಲ್ಪಿಸಿದೆ.

ಇದುವರೆಗೆ ತಲಪಾಡಿ ಚೆಕ್ ಪೋಸ್ಟ್ ಮೂಲಕ ಪಾಸ್ ಇದ್ದವರಿಗೆ ಮಾತ್ರ ದ.ಕ. ಜಿಲ್ಲೆ ಪ್ರವೇಶಕ್ಕೆ ಅವಕಾಶವಿತ್ತು. ಇತರ ಮಾರ್ಗಗಳಲ್ಲೂ ಅವಕಾಶ ನೀಡಬೇಕು ಎಂದು ಬಿಜೆಪಿ ಮುಖಂಡ ಕೆ. ಶ್ರೀಕಾಂತ್  ಅವರು ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು.ಅದರಂತೆ ಷರತ್ತಿಗೊಳಪಟ್ಟು ಇತರ ನಾಲ್ಕು ಮಾರ್ಗಗಳ ಮೂಲಕವೂ ಸಂಚಾರಕ್ಕೆ ಅನುಮತಿ ನೀಡಿ ನ್ಯಾಯಾಲಯ ಆದೇಶಿಸಿದೆ.

ಈ ಕುರಿತು ಸಭೆ ನಡೆಸಿದ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ಬಾಬು, ತಲಪಾಡಿ ಸಹಿತ ಐದು ಮಾರ್ಗಗಳ ಮೂಲಕ ಪಾಸ್ ಇಲ್ಲದೆ ಗುರುವಾರದಿಂದಲೇ ಅಂತಾರಾಜ್ಯ ಪ್ರಯಾಣ ಮಾಡಬಹುದು. ಆದರೆ ಆ್ಯಂಟಿಜೆನ್ ಟೆಸ್ಟ್ ನಡೆಸಿ, ನೆಗೆಟಿವ್ ಸರ್ಟಿಫಿಕೆಟ್ ಹೊಂದಿರಬೇಕು ಮತ್ತು ಕೋವಿಡ್-19 ಜಾಗ್ರತಾ ಪೋರ್ಟಲ್‌ನಲ್ಲಿ ನೋಂದಾಯಿಸಿರಬೇಕು ಎಂದು ಸೂಚಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು