12:52 PM Friday4 - December 2020
ಬ್ರೇಕಿಂಗ್ ನ್ಯೂಸ್
ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕ: ಕುರುಬರ ಅಧ್ಯಕ್ಷ ಎಂ.ವೇಮಣ್ಣ  ಹಿಂಸಾಚಾರ: ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಬಿಗಿ ಬಂದೋಬಸ್ತ್  ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ… ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 30 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ದುರ್ಬಲವಾಗುತ್ತಿರುವ ಬುರೆವಿ ಚಂಡಮಾರುತ: ನಿಟ್ಟುಸಿರು ಬಿಟ್ಟ ಕೇರಳದ ಜನತೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಇಂದು ಪ್ರಧಾನಿ ಸರ್ವ ಪಕ್ಷ ಸಭೆ ಪ್ರತಿಷ್ಠಿತ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಬಿಗಿ ಭದ್ರತೆಯಲ್ಲಿ ಇಂದು ಮತ ಎಣಿಕೆ ಸುಪ್ರೀಂ ಕೋರ್ಟ್ ನಲ್ಲಿ ಸ್ಯಾಂಡಲ್ ವುಡ್ ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ…

ಇತ್ತೀಚಿನ ಸುದ್ದಿ

ದ.ಕ. ಉಸ್ತುವಾರಿ ಸಚಿವರೇ, ಜಿಲ್ಲಾ ವಾರ್ತಾಧಿಕಾರಿಯ ವರ್ಗಾಯಿಸಿದ್ದೀರಲ್ಲ, ಬೇರೆ ಅಧಿಕಾರಿಯ ನೇಮಿಸಿ

November 22, 2020, 7:27 PM

ಮಂಗಳೂರು(reporter Karnataka): ಮೊದಲೇ ರೋಗಗ್ರಸ್ತ ಜಿಲ್ಲಾ ವಾರ್ತಾ ಇಲಾಖೆ ಇನ್ನಷ್ಟು ರೋಗಪೀಡಿತವಾಗಿದೆ. ಇದೀಗ ಜಿಲ್ಲಾ ವಾರ್ತಾ ಇಲಾಖೆಗೆ ಮುಖ್ಯಸ್ಥರೇ ಇಲ್ಲವಾಗಿದೆ. ಇದಕ್ಕೆಲ್ಲ ಕಾರಣ ಚಿಲ್ಲರೆ ರಾಜಕೀಯ ಹಾಗೂ ಸ್ವಜನಪಕ್ಷಪಾತದ ಗಬ್ಬು ವಾಸನೆ.

ಜಿಲ್ಲಾ ವಾರ್ತಾ ಇಲಾಖೆಯಲ್ಲಿ  ಹಿರಿಯ ಸಹಾಯಕ ನಿರ್ದೇಶರಾಗಿ ಕಾರ್ಯ ನಿರ್ವಹಿಸುತ್ತಿದ್ದ ಖಾದರ್ ಷಾ ಅವರನ್ನು ಎರಡು ತಿಂಗಳ ಹಿಂದೆ ದಿಢೀರ್ ಆಗಿ ವರ್ಗಾವಣೆ ಮಾಡಲಾಯಿತು. ಆದರೆ ಇದುವರೆಗೆ ಬದಲಿ ಅಧಿಕಾರಿ ನೇಮಕ ನಡೆದಿಲ್ಲ. ವರ್ಗಾವಣೆ ಮಾಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗಾಗಲಿ, ವರ್ಗಾವಣೆಗೆ ಲಾಬಿ ಮಾಡಿದವರಿಗಾಗಲಿ ಬದಲಿ ಅಧಿಕಾರಿಯ ನೇಮಿಸಲು ಮರೆತುಬಿಟ್ಟು ಜಿಲ್ಲಾ ವಾರ್ತಾ ಇಲಾಖೆಯನ್ನು ಕಡೆಗಣಿಸಿದ್ದಾರೆ. 

ಇದೀಗ ಉಡುಪಿಯ ವಾರ್ತಾ ಸಹಾಯಕರಾದ ಮಂಜುನಾಥ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆ ವಾರ್ತಾ ಇಲಾಖೆಯ ಹೊಣೆಗಾರಿಕೆ ನೀಡಲಾಗಿದೆ. ಶಿವಮೊಗ್ಗಕ್ಕೆ ಈಗಾಗಲೇ ವರ್ಗಾವಣೆ ಬಯಸಿರುವ ಮಂಜುನಾಥ್ ಅವರು ಜಿಲ್ಲೆಗೆ ಸಚಿವರು ಬರುವಾಗ ಅಥವಾ ವಾರದಲ್ಲಿ ಒಂದೆರಡು ಬಾರಿ  ಬಂದು ಹೋಗುತ್ತಾರೆ. ಅವರಿಗೆ ಕೂಡ ಎರಡು ಕಡೆ ಕರ್ತವ್ಯ ನಿರ್ವಹಿಸುವುದು ಕಷ್ಟಕರವಾಗಿದೆ.

ದ.ಕ.ಜಿಲ್ಲಾ ವಾರ್ತಾ ಇಲಾಖೆಯಲ್ಲಿ ಮೊದಲೇ ವಾರ್ತಾ ಸಹಾಯಕರು, ಪ್ರಥಮ ದರ್ಜೆ ಸಹಾಯಕರು, ಬೆರಳಚ್ಚು ಹುದ್ದೆಗಳು ಖಾಲಿ ಬಿದ್ದಿವೆ. ಇದೀಗ ಒಬ್ಬರು ಅಟೆಂಡರ್ ಮತ್ತು ಮೂರು ಮಂದಿ ವಾಹನ ಚಾಲಕರು ಮಾತ್ರ ಇದ್ದಾರೆ. ಸರಕಾರ ಮತ್ತು ಜನರ ನಡುವಿನ ಕೊಂಡಿಯಾಗಿರುವ ವಾರ್ತಾ ಇಲಾಖೆಗೆ ಮಾಹಿತಿಗಾಗಿ ಯಾರೇ ಭೇಟಿ ನೀಡಿದರೂ ಬರಿಗೈಯಲ್ಲಿ ವಾಪಸ್ ಬರಬೇಕಾಗುತ್ತದೆ.

ಅಧಿಕಾರಿಗಳ ವರ್ಗಾವಣೆ ಮಾಡಲಿ, ಯಾರೂ ವಿರೋಧಿಸುವುದಿಲ್ಲ. ಆದರೆ ಕೆಲವೇ ಕೆಲವರ ತೆವಳಿಗೋಸ್ಕರ ವರ್ಗಾವಣೆ ಮಾಡಿದರೆ ಅದನ್ನು ವಿರೋಧಿಸಲೇ ಬೇಕು. ಇಲ್ಲಿ ಕೂಡ ಕೆಲಸ ಮಾಡಿದ್ದು ಕೆಲವರ ತೆವಳು ಮಾತ್ರ. ಇದಕ್ಕೆಲ್ಲ ಉತ್ತರಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ ಮಾತನಾಡಿಸಿದರೆ, ಒತ್ತಡ ಇರುವುದರಿಂದ ವಾರ್ತಾಧಿಕಾರಿ ವರ್ಗಾವಣೆಗೆ ಮುಖ್ಯಮಂತ್ರಿಯವರಿಗೆ ಬರೆದಿದ್ದೇನೆ ಎಂದಷ್ಟೇ ಹೇಳುತ್ತಾರೆ. ಸರಿ, ವರ್ಗಾವಣೆ ಮಾಡಿದ್ದೀರಲ್ಲ, ಹಾಗೆ ಹೊಸ ವಾರ್ತಾಧಿಕಾರಿಯ ನೇಮಿಸಿ ಎನ್ನುವುದಷ್ಟೇ ಬೇಡಿಕೆಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು