1:34 PM Saturday6 - March 2021
ಬ್ರೇಕಿಂಗ್ ನ್ಯೂಸ್
ತಮಿಳುನಾಡು ವಿಧಾನಸಭೆ ಚುನಾವಣೆ: 243 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧೆ?… ಅಸ್ಸಾಂ: 126 ಸ್ಥಾನಗಳಲ್ಲಿ ಬಿಜೆಪಿ 92ರಲ್ಲಿ ಸ್ಪರ್ಧೆ?: ಮಿಕ್ಕ ಸೀಟುಗಳು ಮಿತ್ರ ಪಕ್ಷಕ್ಕೆ? ಹೊರ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೂಡುಗೆರೆಯ ಕುಮಾರ್: ನೆರವಿಗೆ ಬಂದ ಕೆಸಿಎಫ್ ಸೌದಿ… ಕೇರಳ ಬಿಜೆಪಿ ಸಿಎಂ ಕ್ಯಾಂಡಿಡೇಟ್: ಬಿಜೆಪಿ ಹೈಕಮಾಂಡ್ ಇನ್ನೂ ಘೋಷಣೆ ಮಾಡಿಲ್ವಂತೆ! ಸೆಕ್ಸ್ ಸಿಡಿ ಬಳಿಕ ಸಂಕಟದಲ್ಲಿ ಸಾಲು ಸಾಲು ಸಚಿವರು: ಮಾನಹಾನಿ ವರದಿ ತಡೆಯುವಂತೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಡಾ. ಎಂ. ಮೋಹನ್ ಆಳ್ವರಿಗೆ ಕವಿ, ಸಜ್ಜನ ರಾಜಕಾರಣಿ ಬಿ.ಎಂ.ಇದಿನಬ್ಬ ಗೌರವ ಪ್ರಶಸ್ತಿ ಪ್ರದಾನ  ಶ್ಲಾಘ್ಯದಲ್ಲಿ 10ನೇ ತರಗತಿ ಸಿಬಿಎಸ್ ಇ ಗಣಿತ, ವಿಜ್ಞಾನ ಟ್ಯೂಶನ್ ತರಗತಿಗೆ ಪ್ರವೇಶ… ಮಂಗಳೂರಿನಲ್ಲಿ ಹಸುಗೂಸುಗಳ ಬೃಹತ್ ಮಾರಾಟ ಜಾಲ ಪತ್ತೆ: ಗಂಡು ಮಗುವಿಗೆ 6 ಲಕ್ಷ,… ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪಾಲಿಕೆಗೆ ದೂರು ರವಾನೆಗೆ ಬರೋಬ್ಬರಿ 8…

ಇತ್ತೀಚಿನ ಸುದ್ದಿ

ಡಿಕೆ ಸಹೋದರರ ಮೇಲೆ ಸಿಬಿಐ ದಾಳಿ ಹಿಂದೆ ರಾಜಕೀಯ ಷಡ್ಯಂತರ: ಕಾಂಗ್ರೆಸ್ ಆರೋಪ

October 5, 2020, 8:11 PM

ಮಂಗಳೂರು(reporterkarnataka news):

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಅವರ ಮನೆಗೆ ಸಿಬಿಐ ಏಕಾಏಕಿ ದಾಳಿಯು ರಾಜಕೀಯ ಷಡ್ಯಂತರವಾಗಿದೆ. ಈಗಾಗಲೇ ಐಟಿ ಹಾಗೂ ಇಡಿ ಅವರು ದಾಳಿ ನಡೆಸಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಸಿಬಿಐ ದಾಳಿಯನ್ನು  ರಾಜಕೀಯ ದೃಷ್ಟಿಯಿಂದ ಮಾಡಿಸಲಾಗಿದೆ. ಡಿಕೆಶಿ ಅವರನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಕುಗ್ಗುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರರಾದ ಯು.ಟಿ.ಖಾದರ್ ಹಾಗೂ ಐವನ್ ಡಿಸೋಜ ಹೇಳಿದರು.

ಸೋಮವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜಂಟೀ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಅತ್ಯಾಚಾರವಾಗಿದ್ದು, ದೇಶದಾದ್ಯಂತ ಅದರ ವಿರುದ್ಧ ಪ್ರತಿಭಟನೆ ಹಾಗೂ ಆಕ್ರೋಶಗಳು ನಡೆಯುತ್ತಿದೆ.ಆದರೆ ಅದರ ಬಗ್ಗೆ ಮಾತನಾಡದೇ, ಈಗ ೬ ಕ್ಷೇತ್ರಗಳಲ್ಲಿ ಉಪ ಚುನಾವಣೆ ಬರುತ್ತಿದ್ದಂತೆ, ಇಲ್ಲಿಯ ವರೆಗೆ ಸುಮ್ಮನಿದ್ದ ಸರಕಾರ ಈಗ ಸಿಬಿಐ ಕಳುಹಿಸಿ ಡಿಕೆಶಿ ಅವರ ಶಕ್ತಿ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಈ ರೀತಿಯ ದಾಳಿಯನ್ನು ನಡೆಸಿ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ೧೭ ಕೋಟಿ ಹಗರಣ ನಡೆಸಿದ್ದು, ಇದರ ತನಿಖೆಯ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಅವರಿಗೆ ತಾಕತ್ತು ಇದ್ದರೆ ಇದರ ಕುರಿತು ಮುಖ್ಯಮಂತ್ರಿಗಳು ಸಿಬಿಐ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.

ಸರಕಾರ ಈಗ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯನ್ನು ಅನುಸರಿಸುತ್ತಿದೆ. ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹೊರಟಿದೆ. ಮೋದಿ ಮತು ಅಮಿತ್ ಶಾ ದೇಶದಾದ್ಯಂತ ಬೆದರಿಸಿ, ಆಪರೇಷನ್ ಕಮಲ ಮಾಡಿ ಯಾವ ರೀತಿ ರಾಜಕೀಯ ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದರು.

ಬಿಜೆಪಿಗೆ ಈಗಾಗಲೇ ಮುಂದಿನ ಚುನಾವಣೆಯಲ್ಲಿ ಸೋಲುವ ಭಯ ಉಂಟಾಗಿದ್ದು, ಅದರಿಂದ ಜನರ ದೃಷ್ಟಿಯನ್ನು ಬದಲಿಸಲು ಹೊರಟಿದ್ದಾರೆ. ರಾಜ್ಯದಲ್ಲಿ ಯಾರು ಸರಕಾರ ಪರ ಮಾತನಾಡುತ್ತಾರೆ ಅವರನ್ನು ರಕ್ಷಿಸುತ್ತಿದೆ. ಯಾರು ವಿರೋಧಿಸುತ್ತಾರೆ ಅವರ ಮೇಲೆ ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ಈಗಾಗಲೇ ಸೋಲನ್ನು ಒಪ್ಪಿಕೊಂಡಿದೆ ಎಂದು ಮಾಜಿ ಸಚಿವ ಖಾದರ್ ಹೇಳಿದರು.

ಮೇಲ್ವರ್ಗದ ವೈದ್ಯೆಯ ಮೇಲೆ ಅತ್ಯಾಚಾರ ನಡೆದ ಸಂದರ್ಭ ಮರುದಿನವೇ ರಸ್ತೆಯಲ್ಲಿ ಪೊಲೀಸರು ೪ ಮಂದಿಯ ಹೆಣವನ್ನು ರಸ್ತೆಯಲ್ಲಿ ಮಲಗಿಸಿದ್ದರು. ಆದರೆ ಈಗ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದಿದ್ದು, ಈಗ ಈ ವಿಚಾರವನ್ನೇ ಮುಚ್ಚಿಹಾಕಲು ಹೊರಟಿದ್ದಾರೆ. ಅತ್ಯಾಚಾರ ನಡೆದು ಇಷ್ಟು ದಿನವಾದರೂ ಪ್ರಧಾನಮಂತ್ರಿ ಇಲ್ಲಿಯ ತನಕ ಒಂದು ಸಾಂತ್ವಾನವನ್ನು ಕೂಡ ಹೇಳಿಲ್ಲ ಎಂದು ಟೀಕಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು