ಇತ್ತೀಚಿನ ಸುದ್ದಿ
ದೇಶದಲ್ಲಿ ಒಂದೇ ದಿನ ಕೊರೊನಾಕ್ಕೆ 1115 ಬಲಿ: 33,98,845 ಮಂದಿ ಗುಣಮುಖ
September 9, 2020, 5:05 AM

ನವದೆಹಲಿ(reporterkarnataka news): ಕೊರೊನಾದ ಮಹಾ ಸ್ಫೋಟಕ್ಕೆ ದೇಶ ತತ್ತರಿಸಿದೆ. ಹೊಸದಾಗಿ ಕೊರೋನಾ 1115 ಮಂದಿಯ ಬಲಿಪಡೆದುಕೊಂಡಿದೆ. ಕೊರೊನಾದಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ ಇದೀಗ 73, 890ಕ್ಕೆ ತಲುಪಿದೆ. ಒಂದೇ ದಿನದಲ್ಲಿ ದಾಖಲೆ ಮಂದಿಗೆ ಕೊರೊನಾ ಸೋಂಕು ತಗುಲಿದೆ. 24 ಗಂಟೆ ಅವಧಿಯಲ್ಲಿ 89, 706 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 43, 70, 129ಕ್ಕೆ ತಲುಪಿದೆ. ಕೊರೊನಾ ಸೋಂಕಿಗೆ ತುತ್ತಾಗಿದ್ದ 33, 98, 845 ಮಂದಿ ಗುಣಮುಖರಾಗಿದ್ದಾರೆ.
ದೇಶದ ವಿವಿಧ ಆಸ್ಪತ್ರೆಗಳಲ್ಲಿ ಇದೀಗ ಕೊರೊನಾ ಸೋಂಕಿತ 8, 97, 394 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.