1:46 PM Friday27 - November 2020
ಬ್ರೇಕಿಂಗ್ ನ್ಯೂಸ್
ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಚೇರಿ ಇಂದು ಉದ್ಘಾಟನೆ ನಿವಾರ್ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ  ಸೇರಿ 6 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್  ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: 5 ಮಂದಿ ರೋಗಿಗಳು ಸಜೀವ ದಹನ, ತನಿಖೆಗೆ ಆದೇಶ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ಇಂದು: ವಿಜಯ ನಗರ ಜೆಲ್ಲೆ ರಚನೆ… ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ನೂತನ ಮೇಳದ ಪ್ರಥಮ ವರ್ಷದ ತಿರುಗಾಟ 27ರಂ ವಿದ್ಯುತ್ ಸಂಪರ್ಕವೇ ಕಾಣದ 2 ಮನೆಗಳಿಗೆ  ಕೊನೆಗೂ ಬಂತು ಬೆಳಕು ! ಶ್ರೀನಗರದಲ್ಲಿ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರ ದಾಳಿ: ಸ್ಥಳಕ್ಕೆ ಹೆಚ್ಚುವರಿ ಸೇನೆ ಚಿಕ್ಕಬಳ್ಳಾಪುರದ ಬಳಿ ಕಾರುಗಳಿಗೆ ಡಿಕ್ಕಿ ಹೊಡೆದು ಅಂಗಡಿಗೆ ನುಗ್ಗಿದ  ಕ್ಯಾಂಟರ್ : ನಾಲ್ವರ… ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ನಾಳೆ ಸಂಸದರ ಸಭೆ ಕರೆದ ಸಿಎಂ ಯಡಿಯೂರಪ್ಪ

ಇತ್ತೀಚಿನ ಸುದ್ದಿ

ಆರೋಗ್ಯ ಇಲಾಖೆಯ ವೈಫಲ್ಯಕ್ಕೆ ಮೈಸೂರು ವೈದ್ಯಾಧಿಕಾರಿ ಬಲಿ: ಡಿವೈಎಫ್ ಐ ಆರೋಪ

August 21, 2020, 3:23 PM

ಮಂಗಳೂರು(reporterkarnataka news):

ಕೊರೊನಾ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ಎಡವಿದೆ. ರಾಜ್ಯದಲ್ಲಿ ಸರಕಾರಿ ಆಸ್ಪತ್ರೆಗಳಿಗೆ ಕೊರೊನಾ ಪ್ರಕರಣ ನಿಭಾಯಿಸಲು ವೈದ್ಯರು ಸಹಿತ ನುರಿತ ಸಿಬ್ಬಂದಿಗಳ ವ್ಯವಸ್ಥೆ ಮಾಡದೆ ಬರೇ  ಇರುವ ವೈದ್ಯರುಗಳಿಂದಲೇ ವಿಪರೀತ  ಕೆಲಸಗಳನ್ನು ನಿರ್ವಹಿಸಿದ ಕಾರಣ ಒತ್ತಡಕ್ಕೆ ಸಿಲುಕಿದ ವೈದ್ಯರು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಯ ನಿರ್ಮಾಣವಾಗಿದೆ. ಸರಕಾರದ ಆರೋಗ್ಯ ಇಲಾಖೆಯ ವೈಫಲ್ಯತೆ ಮೈಸೂರಿನ ತಾಲೂಕು ವೈದ್ಯಾಧಿಕಾರಿ ಡಾ ನಾಗೇಂದ್ರ ಅವರನ್ನು ಬಲಿಪಡೆದಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದರು.

ಅವರು ಶುಕ್ರವಾರ ನಗರದ ಉರ್ವಸ್ಟೋರ್ ನಲ್ಲಿ ಡಿವೈಎಫ್ಐ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಸರಕಾರಿ ಆಸ್ಪತ್ರೆ ಬಲಪಡಿಸಲು, ಖಾಸಗೀ ಆಸ್ಪತ್ರೆಗಳನ್ನು ನಿಯಂತ್ರಿಸಲು, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮತ್ತು ಎಲ್ಲ ಕೊರೊನಾ ಸೊಂಕಿತರಿಗೆ ಸಮಾನ ಗುಣಮಟ್ಟದ ಉಚಿತ ಚಿಕಿತ್ಸೆಗೆ ಒತ್ತಾಯಿಸಿ ನಡೆದ ಪ್ರತಿಭಟನೆ ನಡೆಯಿತು.

ಸರಕಾರ ಕೊರೊನಾ ರೋಗ ಎದುರಿಸಲು ಬೇಕಾದ ಸಲಕರಣೆಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದೆ. ಸರಕಾರದ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ, ಖಾಲಿ ಇರುವ ಹುದ್ದೆ ಗಳನ್ನು ಭರ್ತಿಗೊಳಿಸುವ ಹಾಗೂ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸುವ ಯಾವುದೇ ಕೆಲಸಗಳು ಈವರೆಗೂ ನಡೆದಿಲ್ಲ. ಸರಕಾರಿ ಆಸ್ಪತ್ರೆಗಳ ವೈಫಲ್ಯತೆ ಖಾಸಗೀ ಆಸ್ಪತ್ರೆಗಳು ಕೊರೊನಾ ಹೆಸರಲಿ ಊಟಿ ಮಾಡುವ ಸ್ಥಿತಿಗೆ ತಲುಪುವಂತೆ ಮಾಡಿದೆ. ಖಾಸಗಿ ಆಸ್ಪತ್ರೆಗಳು ಯಾವುದೇ ಮುಲಾಜಿಲ್ಲದೇ ಚಿಕಿತ್ಸೆ ಹೆಸರಲ್ಲಿ ರೋಗಿಗಳನ್ನು ವಂಚಿಸುವ ಪ್ರಕರಣ ದಿನ ನಿತ್ಯ ವರದಿಯಾದರೂ ಖಾಸಗೀ ಆಸ್ಪತ್ರೆಯ ವಿರುದ್ದ ಈವರೆಗೆ ಒಂದೇ ಒಂದು ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ. ಈಗಾಗಲೇ ಜನ ಸಾಮಾನ್ಯರು ಉದ್ಯೋಗವಿಲ್ಲದೆ , ಬಿಡಿಗಾಸು ಇಲ್ಲದೇ ಕಂಗಾಲಾಗಿದ್ದು ಒಂದೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಇನ್ನು ಆರೋಗ್ಯ ಕಾಳಜಿ ವಹಿಸೋದು ಅವರಿಂದ ಸಾಧ್ಯವಾಗದ ಮಾತು. ಆರೋಗ್ಯ ಕಾಳಜಿ ವಹಿಸೋದು ಸರಕಾರದ ಕರ್ತವ್ಯ. ಸರಕಾರ ಎಲ್ಲ ಕೊರೊನಾ ಸೊಂಕಿತರಿಗೂ ಸಮಾನ ಗುಣಮಟ್ಟದ ಉಚಿತ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿ ಡಿವೈಎಫ್ಐ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. 

ಡಿವೈಎಫ್ಐ ಉರ್ವಸ್ಟೋರ್ ಘಟಕದ ಅದ್ಯಕ್ಷ ಪ್ರಶಾಂತ್ ಎಂ.ಬಿ., ಮನೋಜ್ ಉರ್ವಸ್ಟೋರ್, ಕಿಶೋರ್, ನಾಗೇಂದ್ರ, ರಘುವೀರ್, ಪ್ರದೀಪ್, ತಿಲಕ್, ತೇಜಸ್ವಿನಿ, ಹರಿಣಾಕ್ಷಿ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು