2:00 PM Friday4 - December 2020
ಬ್ರೇಕಿಂಗ್ ನ್ಯೂಸ್
ದೇಶದ ಜನರಿಗೆ ಶೀಘ್ರವೇ ಕೊರೊನಾ ಲಸಿಕೆ ಸಿದ್ಧ:  ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ… ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕ: ಕುರುಬರ ಅಧ್ಯಕ್ಷ ಎಂ.ವೇಮಣ್ಣ  ಹಿಂಸಾಚಾರ: ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಬಿಗಿ ಬಂದೋಬಸ್ತ್  ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ… ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 30 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ದುರ್ಬಲವಾಗುತ್ತಿರುವ ಬುರೆವಿ ಚಂಡಮಾರುತ: ನಿಟ್ಟುಸಿರು ಬಿಟ್ಟ ಕೇರಳದ ಜನತೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಇಂದು ಪ್ರಧಾನಿ ಸರ್ವ ಪಕ್ಷ ಸಭೆ ಪ್ರತಿಷ್ಠಿತ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಬಿಗಿ ಭದ್ರತೆಯಲ್ಲಿ ಇಂದು ಮತ ಎಣಿಕೆ

ಇತ್ತೀಚಿನ ಸುದ್ದಿ

ಜಾಗಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್‌ ಪಡೆದ ಲಂಚ ಎಷ್ಟು ಗೊತ್ತೇ?: ಬರೋಬ್ಬರಿ 1.10 ಕೋಟಿ

August 15, 2020, 3:09 PM

ಹೈದರಾಬಾದ್(reporterkarnataka News): ತಹಶೀಲ್ದಾರರೊಬ್ಬರು ಲಂಚ ಪಡೆಯುತ್ತಿದ್ದಾಗಲೇ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಸಿಕ್ಕಿ ಬಿದ್ದಿದ್ದಾರೆ. ಲಂಚ ಪಡೆದ ಹಣ ಒಂದೆರಡು ಲಕ್ಷವಲ್ಲ, ಬರೋಬ್ಬರಿ 1.10 ಕೋಟಿ ರೂ.

ಇದು ನಡೆದದ್ದು ಹೈದರಾಬಾದಿನ ಕೀಸರದಲ್ಲಿ. ತಹಶೀಲ್ದಾರ್ ಎರ್ವಾ ಬಲರಾಜು ಎಂಬವರು ಎಸಿಬಿ ಬಲೆಗೆ ಬಿದ್ದವರು. ಶುಕ್ರವಾರ ರಾತ್ರಿ ಎಸಿಬಿ ಕಾರ್ಯಾಚರಣೆ ನಡೆಸಿದೆ. ನೋಟಿನ ಕಂತೆಗಳು 500 ರೂ. ಮುಖಬೆಲೆಯದ್ದು ಆಗಿರುವುದರಿಂದ ನೋಟು ಎಣಿಕೆ ಕಾರ್ಯ ಮುಗಿದಾಗ ಶನಿವಾರ ಬೆಳಗಾಗಿದೆ. ತಹಶೀಲ್ದಾರ್ ಅವರ ಎ.ಎಸ್. ರಾವ್ ನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. 28 ಎಕರೆ ಜಮೀನಿಗೆ ಸಂಬಂಧಿಸಿದಂತೆ ಲಂಚ ಪಡೆಯಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು