ಇತ್ತೀಚಿನ ಸುದ್ದಿ
ಕೊರೋನಾಕ್ಕೆ ಉತ್ತರ ಪ್ರದೇಶದ ಸಚಿವ, ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಬಲಿ
August 16, 2020, 2:00 PM

ಲಕ್ನೋ(reporterkarnataka): ಉತ್ತರಪ್ರದೇಶದ ಸಚಿವ ಚೇತನ್ ಚೌಹಾಣ್ ಕೊರೋನಾಕ್ಕೆ ಬಲಿಯಾಗಿದ್ದಾರೆ. ಚೇತನ್ ಚೌಹಾಣ್ ಮಾಜಿ ಕ್ರಿಕೆಟ್ ಆಟಗಾರ ಕೂಡ ಆಗಿದ್ದಾರೆ.
ಜುಲೈ 12ರಂದು ಅವರು ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಹರ್ಯಾಣದ ಗುರು ಗ್ರಾಮದಲ್ಲಿರುವ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಅತ್ಯುತ್ತಮ ಕ್ರಿಕೆಟ್ ಆಟಗಾರರೂ ಕೂಡ ಆಗಿದ್ದ ಚೇತನ್ 40 ಟೆಸ್ಟ್ ಮತ್ತು ಏಳು ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಕೊರೋನಾ ಸೋಂಕಿಗೆ ತುತ್ತಾದ ಬಳಿಕ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಅವರು ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಉತ್ತರ ಪ್ರದೇಶದ ಬರೇಲಿ ಅವರ ಹುಟ್ಟೂರು