ಇತ್ತೀಚಿನ ಸುದ್ದಿ
20 ಲಕ್ಷ ಮೀರಿತು ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ
August 7, 2020, 4:57 AM

ನವದೆಹಲಿ(reporterkarnataka news):
ಮಾರಕ ಕೊರೋನಾ ದೇಶದಲ್ಲಿ ಅಬ್ಬರ ಮುಂದುವರಿಸಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದೆ.
ಕೊರೋನಾ ರಣ ಬಿರುಗಾಳಿಯಂತೆ ದೇಶದಲ್ಲಿ ಹರಡುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ 62,538 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದು ಒಂದೇ ದಿನ ದಾಖಲಾದ ಅತ್ಯಧಿಕ ಪ್ರಕರಣವಾಗಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 20, 27,075ಕ್ಕೆ ತಲುಪಿದೆ.
ದೇಶದ ಕೋವಿಡ್ ಆಸ್ಪತ್ರೆಗಳಲ್ಲಿ 6,07, 384 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಹಲವರ ಪರಿಸ್ಥಿತಿ ಗಂಭೀರವಾಗಿದೆ.