5:03 AM Monday25 - January 2021
ಬ್ರೇಕಿಂಗ್ ನ್ಯೂಸ್
ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ ಕಟೀಲು ಮೇಳ ಸೇವೆ ಆಟಗಳು:  ಇಂದು ಎಲ್ಲೆಲ್ಲಿ?  ನೀವೇ ನೋಡಿ ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್… ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ… ಕಾಸರಗೋಡು: ಮೆಡಿಕಲ್ ಶಾಪ್ ಗೆ ಔಷಧ ಖರೀದಿಸಲು ಬಂದ ವ್ಯಕ್ತಿಯನ್ನು ಗುಂಪೊಂದು ಥಳಿಸಿ… ಕಾಳು ಹಾಕಿ ಕೋಳಿ ಕದಿಯುವ ಭಿಕ್ಷುಕರಿದ್ದಾರೆ ಎಚ್ಚರಿಕೆ: ನಿಮ್ಮ ಮನೆಗೂ ಬಂದಾರು ಜೋಕೆ!… ವಿವಾದಾತ್ಮಕ ವಾಟ್ಸಾಪ್ ಚಾಟ್ : ಮಹಾರಾಷ್ಟ್ರ ಸರಕಾರದಿಂದ ಅರ್ನಾಬ್ ಮತ್ತೆ ಬಂಧನ ಸಾಧ್ಯತೆ

ಇತ್ತೀಚಿನ ಸುದ್ದಿ

ಕೊರೊನಾ: ವಿದೇಶದಲ್ಲಿ ನೆಲೆಸಿದ್ದ ಕನ್ನಡಿಗರ ಪಾಡು ಕೇಳುವವರೇ ಇಲ್ಲ.

August 8, 2020, 10:18 AM

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಕೊರೊನಾದಿಂದ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಸಾವಿನ ಸಂಖ್ಯೆ ಮಿತಿ ಮೀರಿದೆ. ದೇಶದಲ್ಲಿ ಮಾತ್ರವಲ್ಲದೆ, ವಿದೇಶಿಗಳಲ್ಲಿ ನೆಲೆಸಿರುವ ಕನ್ನಡಿಗರ ಗೋಳನ್ನು ಕೂಡ ಕೇಳುವವರೇ ಇಲ್ಲ. ಮಸ್ಕತ್ ವೊಂದರಲ್ಲೇ 1900 ಮಂದಿ ಕನ್ನಡಿಗರು ಕೆಲಸ ಕಳೆದು ಕೊಂಡಿದ್ದಾರೆ. 

ವಿಶ್ವದ ದೊಡ್ಡಣ್ಣ ಅಮೆರಿಕ ಸೇರಿದಂತೆ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಕನ್ನಡಿಗರು ಉದ್ಯೋಗ ನಿಮಿತ್ತ ನೆಲೆಸಿದ್ದಾರೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನೌಕರಿ ಹೊಂದಿದವರಲ್ಲಿ ಹೆಚ್ಚಿನವರ ಉದ್ಯೋಗಗಕ್ಕೆ ಕುತ್ತು ಬಾರದಿದ್ದರೂ ಗಲ್ಫ್ ಹಾಗೂ ಇತರ ದೇಶಗಳಲ್ಲಿ ನೌಕರಿ ಹೊಂದಿದವರು ಉದ್ಯೋಗ ಕಳೆದು ಕೊಂಡಿದ್ದಾರೆ. ದುಬೈ, ಕುವೆತ್, ಸೌದಿ ಅರೇಬಿಯಾ, ಮಸ್ಕತ್ ಮುಂತಾದ ಕಡೆಗಳಲ್ಲಿ ಉದ್ಯೋಗ ಮಾಡುತ್ತಿದ್ದ 10 ಸಾವಿರಕ್ಕೂ ಹೆಚ್ಚು ಕನ್ನಡಿಗರು ಕೊರೊನಾ ಕಾರಣದಿಂದ ವಿವಿಧ ಕಂಪನಿಗಳಿಂದ ಹೊರ ದಬ್ಬಲ್ಪಟ್ಟಿದ್ದಾರೆ. ಇದರಲ್ಲಿ ಶೇ.  90ರಷ್ಟು ಜನರು ಈಗಾಗಲೇ ಸ್ವದೇಶಕ್ಕೆ ಬಂದಿದ್ದಾರೆ. ಇವರೆಲ್ಲ ಇಂದು ಮೀನು- ತರಕಾರಿ ಮಾರುವುದರಿಂದ ಹಿಡಿದು ಸೆಕ್ಯುರಿಟಿ ಗಾರ್ಡ್ ವರೆಗಿನ ಕೆಲಸ ಮಾಡುತ್ತಿದ್ದಾರೆ. 

ವಿದೇಶದಲ್ಲಿ ಅತ್ತ ಕೆಲಸವಿಲ್ಲದೆ, ಇತ್ತ ಊರಿಗೆ ಬರಲಾರದೆ ಕಷ್ಟ ಅನುಭವಿಸಿದವರು ಇನ್ನೂ ಸಾಕಷ್ಟು ಮಂದಿ ಇದ್ದಾರೆ. ಇನ್ನು ವಿದೇಶದಲ್ಲಿ ನೆಲೆಸಿರುವ  ಕನ್ನಡಿಗರನ್ನು ನಮ್ಮವರೇ ಕೀಳಾಗಿ ಕಂಡದುಂಟು. ಕೊರೊನಾ ತಂದವರೇ ಅನಿವಾಸಿ ಭಾರತೀಯರು ಎಂಬ ಅಪವಾದವೂ ಉಂಟು. ತಮ್ಮ ಕಷ್ಟಕ್ಕೆ  ಊರು ಬಿಟ್ಟು ದೂರದ ದೇಶಕ್ಕೆ ತೆರಳಿದವರನ್ನು ಸ್ವತಃ ಸಂಬಂಧಿಕರೇ ಬರಬೇಡಿ, ಈಗ ರೋಗ ತರಬೇಡ ಎಂದು ಹೇಳಿದ ಹಲವು ನಿದರ್ಶನಗಳು ಇದೆ.

ದುಬೈಯಿಂದ ಕೇರಳದ  ಕರಿಪುರ್  ಹೊರಟವರು ಇನ್ನೇನು ಊರು ತಲುಪ ಬೇಕನ್ನುವಷ್ಟರಲ್ಲಿ ಅವರ ಕನಸುಗಳೆಲ್ಲ ಭಗ್ನವಾಗಿದೆ. ಕೆಲವೇ ಕ್ಷಣದಲ್ಲಿ ಲ್ಯಾಂಡ್ ಅಗಬೇಕಿದ್ದ ಏರ್ ಇಂಡಿಯಾ ವಿಮಾನ ರನ್ ವೇ ಯಿಂದ ಮುಂದೆ ಚಲಿಸಿ ಗೋಡೆಗೆ ಡಿಕ್ಕಿ ಹೊಡೆದು 35 ಅಡಿ ಆಳಕ್ಕೆ ಬಿದ್ದು ಇಬ್ಬಾಗವಾಗಿದೆ.

ಪೈಲೆಟ್ ಸೇರಿ ಹಲವು ಮಂದಿ ದುರ್ಮರಣ ಹೊಂದಿದ್ದಾರೆ. ಅದೃಷ್ಟವಶಾತ್ ಏನು ಅರಿಯದ ಪುಟ್ಟ ಕಂದಮ್ಮಗಳು ಅಪಾಯದಿಂದ ಪಾರಾಗಿದ್ದಾರೆ. ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಒಟ್ಟಿನಲ್ಲಿ ಕೊರೊನಾದಿಂದ ಏನೆಲ್ಲ ಅವಾಂತರವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು