ಇತ್ತೀಚಿನ ಸುದ್ದಿ
ಕೊರೊನಾ ಹೊಸ ವೈರಸ್ ಪತ್ತೆ: 40 ರಾಷ್ಟ್ರಗಳಿಂದ ಬ್ರಿಟನ್ ಗೆ ವಿಮಾನ ಸೇವೆ ರದ್ದು
December 22, 2020, 11:58 AM

ಲಂಡನ್ : ಕೊರೊನಾದ ಹೊಸ ವೈರಸ್ ಪತ್ತೆಯಾಗಿರುವ ಬ್ರಿಟನ್ ಗೆ ವಿಶ್ವದ 40 ರಾಷ್ಟ್ರಗಳು ವಿಮಾನ ಸೇವೆ ರದ್ದುಪಡಿಸಿವೆ.
ಲಂಡನ್ ನಗರದಲ್ಲಿ ಬಿಗಿ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿರುವ ಪ್ರದೇಶಗಳಲ್ಲಿ ನಿಗಾ ವಹಿಸಲಾಗಿದೆ.
ಹೊಸ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆಸ್ಟ್ರಿಯಾ, ಬಲ್ಗೇರಿಯಾ, ಜರ್ಮನಿ, ಕುವೈತ್ ಸೇರಿದಂತೆ ವಿಶ್ವದ 40 ರಾಷ್ಟ್ರಗಳು ಲಂಡನ್ ಗೆ ವಿಮಾನ ಸೇವೆ ರದ್ದುಪಡಿಸಿದೆ.