6:05 AM Sunday24 - January 2021
ಬ್ರೇಕಿಂಗ್ ನ್ಯೂಸ್
ಶ್ರೀನಿವಾಸಪುರ ತಾಲೂಕಿನ 25 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ: ವಿವರಕ್ಕೆ ನೀವೇ… ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಪರೀಕ್ಷೆ ಮುಂದೂಡಿಕೆ, ಸಿಸಿಬಿ ಪೊಲೀಸರಿಂದ 6 ಮಂದಿಯ ಬಂಧನ ಪ್ರತಿಭಟನೆ ನಿರತ ರೈತರಿಗೆ ಟ್ರ್ಯಾಕ್ಟರ್ Rally ನಡೆಸಲು ದಿಲ್ಲಿ ಪೊಲೀಸರು ಕೊನೆಗೂ ಅನುಮತಿ ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು…

ಇತ್ತೀಚಿನ ಸುದ್ದಿ

ಕೊರೊನಾದೊಂದಿಗೂ ಬದುಕು ಸಾಧ್ಯ: ಭಯದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಮಬ್ಬಾಗದಿರಲಿ

August 17, 2020, 1:34 PM

ದೇಶದಾದ್ಯಂತ ಕೊರೊನಾ ಮಹಾಮಾರಿ ಎಷ್ಟೊಂದು ತೀವ್ರವಾಗಿ ಅಪ್ಪಳಿಸಿದೆ ಎಂದರೆ ಇಡೀ ವಿಶ್ವವೇ ಒಮ್ಮೆ ತಲೆಕೆಳಗಾಗುವಂತೆ ಮಾಡಿದೆ. ಇದರ ಪ್ರಭಾವ ಎಲ್ಲಾ ಕ್ಷೇತ್ರಗಳಿಗೂ ತೀವ್ರ ಮಟ್ಟದಲ್ಲಿ ಬೀರಿದೆ. ನಿರುದ್ಯೋಗ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೊರೊನಾ ಶಾಶ್ವತವಲ್ಲ, ಕೊರೊನೋತ್ತರ ಜೀವನವಿದೆ ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಜೊತೆಗೆ ಅದೇ ವೇಗದಲ್ಲಿ ಜನರು ಉದ್ಯೋಗ ಕಳೆದು ಕೊಳ್ಳುತ್ತಿದ್ದಾರೆ. ಶಾಲಾ – ಕಾಲೇಜುಗಳು ಇನ್ನೂ ತೆರೆದಿಲ್ಲ. ಎಷ್ಟೋ ಕಂಪನಿಗಳು ವ್ಯಾಪಾರ ವಹಿವಾಟು ಇಲ್ಲದೆ  ತಮ್ಮ ಉದ್ಯೋಗಿಗಳನ್ನು ಏಕಾಏಕಿಯಾಗಿ  ಕೆಲಸದಿಂದ ತೆಗೆಯುತ್ತಿದೆ. ಕೆಲವು ಕಂಪನಿಗಳು ಶೇ. 10ರಷ್ಟು ಸಂಬಳಕ್ಕೆ ಕತ್ತರಿ ಹಾಕಿವೆ. ಇನ್ನೂ ಕೆಲವು ಕಂಪನಿಗಳು ಶೇ. 50ರಷ್ಟು ಕಟ್ ಮಾಡಿವೆ. ಎಲ್ಲ ತರಹದ ಇನ್ ಕ್ರಿಮೆಂಟ್ ಗೆ ಕಡಿವಾಣ ಹಾಕಿವೆ. ಟಿವಿಪಿ, ಎಲ್ ಟಿಎಗೆ ಕನ್ನ ಹಾಕುವೆ. ಆದರೆ ಉದ್ಯೋಗ ಕಳೆದು ಕೊಂಡವರ, ಅರ್ಧ ಸಂಬಳಕ್ಕೆ ದುಡಿಯುವವರ ಪಾಡು ಆಧೋಗತಿಗೆ ಇಳಿದಿದೆ.

ಉದ್ಯೋಗ ಕಳೆದುಕೊಂಡು ಸಾಲದ  ಕಂತು ಕಟ್ಟಲಾಗದೆ ಜನರು ಕಂಗಾಲಾಗಿದ್ದಾರೆ. ಇನ್ನು ಕೆಲವು ಕಂಪನಿಗಳಲ್ಲಿ ಅರ್ಧ ತಿಂಗಳ ಸಂಬಳ ಅದನ್ನು ಸರಿಯಾದ ಸಮಯಕ್ಕೆ ನೀಡದೆ ಇರುವುದರಿಂದ ತಿಂಗಳ ಜೀವನ ನಿರ್ವಹಣೆ  ದುಃಖಕರವಾಗಿದೆ. 

ಶಿಕ್ಷಣ ಕ್ಷೇತ್ರಕ್ಕೂ ಬಾರಿ ಹೊಡೆತ ಬಿದ್ದಿದೆ. ಈ  ಕ್ಷೇತ್ರದ ನೌಕರರ ಪರಿಸ್ಥಿತಿಯೇ ಕೇಳುವುದೇ ಬೇಡ. ತರಗತಿ ಗಳಲ್ಲಿ ಮಕ್ಕಳಿಲ್ಲದೆ ಶಿಕ್ಷಕರು ವಿಧಿಯಿಲ್ಲದೆ ಅಂತರ್ಜಾಲ ತರಗತಿಗಳ ಮೊರೆ ಹೋಗಿದ್ದಾರೆ. 

ಇದರೊಂದಿಗೆ ನೆಟ್ವರ್ಕ್ ಸಮಸ್ಯೆ ತಲೆ ನೋವಾಗಿದೆ. ಇನ್ನು ವಿದ್ಯಾರ್ಥಿಗಳು ಪದವಿ ನಂತರ ಉನ್ನತ ಶಿಕ್ಷಣದ ಉತ್ಸಾಹ ಇದ್ದರೂ ಪರಿಸ್ಥಿತಿಗೆ ಹೆದರಿ ಹಿಂದೇಟು ಹಾಕುವಂತಾಗಿದೆ.  ಇದು ಹೀಗೆ ಮುಂದುವರಿದರೆ  ಮುಂದಿನ ಜನಾಂಗ ಕೆಲಸ ಹುಡುಕುವುದರಲ್ಲೇ ಕಾಲ ಕಳೆಯ ಬೇಕಾಗುತ್ತದೆ. ಮಾಸ್ಟರ್ಸ್ ಡಿಗ್ರಿ ಎಂಬ ಪದ ಇತಿಹಾಸದಲ್ಲಿ ಅಡಕವಾಗುವ ದಿನ ದೂರ ಇಲ್ಲ. ಇವೆಲ್ಲದರ ಮಧ್ಯೆ

ಕೊರೋನಾ ಶಾಶ್ವತವಲ್ಲ . ಕೊರೊನಾ ನಂತರ ಜೀವನದವಿದೆ ಎಂದು ಮನಗಂಡು ಧೃತಿಗೆಡದೆ ಯುವ ಸಮುದಾಯ ಜಾಗರೂಕರಾಗಿ ಭವಿಷ್ಯದತ್ತ ಮುಂದೆ ಸಾಗಬೇಕಾಗಿದೆ.

  • ಮಲ್ಲಿಕಾ,  ಸಹಾಯಕ ಪ್ರಾದ್ಯಾಪಕರು 

ಎಂಬಿಎ ವಿಭಾಗ,  ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಳಚ್ಚಿಲ್ ಮಂಗಳೂರು

ಇತ್ತೀಚಿನ ಸುದ್ದಿ

ಜಾಹೀರಾತು