ಇತ್ತೀಚಿನ ಸುದ್ದಿ
ಕೊರೊನಾ ವಾರಿಯರ್ಸ್ ವೈದ್ಯರಿಗೆ ಸಮಾಜ ಚಿರ ಋಣಿ: ಶಾಸಕ ಡಾ.ವೈ ಭರತ್ ಶೆಟ್ಟಿ ಅಭಿಮತ
November 7, 2020, 3:21 PM

ಸುರತ್ಕಲ್(reporterkarnataka news):
ಕೊರೊನಾ ಅವಧಿಯಲ್ಲಿ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿರುವ ಕೊರೊನಾ ವಾರಿಯರ್ಸ್ ಗಳಾದ ವೈದ್ಯರಿಗೆ ಸಮಾಜ ಯಾವತ್ತೂ ಚಿರ ಋಣಿಯಾಗಿರುತ್ತದೆ ಎಂದು ಮಂಗಳೂರು ನಗರ ಉತ್ತರ ಶಾಸಕರಾಗಿರುವ ಡಾ.ವೈ ಭರತ್ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಅತ್ತಾವರದ ಐಎಂಎ ಹೌಸಿನ ಡಾ.ಎ.ವಿ ರಾವ್ ಸಭಾಂಗಣದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಇದರ ಮಂಗಳೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್, ನಿರ್ಗಮಿತ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಐಎಂಎ ಸದಸ್ಯರು ಉಪಸ್ಥಿತರಿದ್ದರು.