ಇತ್ತೀಚಿನ ಸುದ್ದಿ
ಮಾರಕ ಕೊರೊನಾಕ್ಕೆ ಒಂದೇ ದಿನ 1033 ಮಂದಿ ಬಲಿ: 65,97,210 ಮಂದಿ ಗುಣಮುಖ
October 18, 2020, 12:16 PM

ನವದೆಹಲಿ(reporterkarnataka news): ದೇಶದಲ್ಲಿ ಕೊರೊನಾದ ರಣಕೇಕೆ ಮುಂದುವರಿದಿದೆ. ಕಳೆದ 24 ಗಂಟೆ ಅವಧಿಯಲ್ಲಿ 61, 871 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ 74, 94,552 ಕ್ಕೆ ತಲುಪಿದೆ. ವಿವಿಧ ಆಸ್ಪತ್ರೆಗಳಲ್ಲಿ 7, 83, 311 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ 24 ಗಂಟೆ ಅವಧಿಯಲ್ಲಿ ಕೊರೊನಾದಿಂದ 1033 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಕೊರೊನಾ ಸೋಂಕಿತರಾಗಿದ್ದ 65, 97, 210 ಮಂದಿ ಇದೀಗ ಗುಣಮುಖರಾಗಿದ್ದಾರೆ.