ಇತ್ತೀಚಿನ ಸುದ್ದಿ
ಕೊಡಗಿನಲ್ಲಿ ಮತ್ತೆ ಭಾರೀ ಮಳೆ: ತುಂಬಿ ಹರಿದ ನದಿಗಳು, ಜನರಲ್ಲಿ ಆತಂಕ
August 11, 2020, 3:11 AM

ಮಡಿಕೇರಿ(reporterkarnatakanews):
ಕೊಡಗಿನಲ್ಲಿ ಮತ್ತೆ ಮಳೆ ಆರಂಭವಾಗಿದೆ. ಭಾರೀ ಮಳೆ ಸುರಿಯುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ತುಂಬಿ ಹರಿಯುತ್ತಿವೆ.
ನಾಪತ್ತೆಯಾಗಿರುವ ನಾರಾಯಣ ಆಚಾರ್ ಅವರ ಕುಟುಂಬ ಸದಸ್ಯರ ಪೈಕಿ ಒಬ್ಬರ ಮೃತದೇಹವನ್ನು ಮಾತ್ರ ಇದುವರೆಗೆ ಪತ್ತೆ ಹಚ್ಚಲಾಗಿದೆ. ಶೋಧ ಕಾರ್ಯ ಇಂದು ಕೂಡ ಮುಂದುವರಿಯಲಿದೆ
ಮಳೆ ಮತ್ತೆ ಆರಂಭವಾಗಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶ ಜಲಾವೃತಗೊಂಡಿದೆ. ಈ ಮಧ್ಯೆ ಆಗಸ್ಟ್ 31ರ ವರೆಗೆ ಕೊಡಗಿಗೆ ಬೃಹತ್ ವಾಹನಗಳ ಆಗಮನವನ್ನು ನಿರ್ಬಂಧಿಸಲಾಗಿದೆ.