ಇತ್ತೀಚಿನ ಸುದ್ದಿ
ಕಾಂಗ್ರೆಸ್ ನಿಂದ 2 ಕೋಟಿ ರೈತರ ಸಹಿ ಸಂಗ್ರಹ: ರಾಷ್ಟ್ರಪತಿಗೆ ಸಲ್ಲಿಸಲು ನಿರ್ಧಾರ
December 23, 2020, 8:48 AM

ನವದೆಹಲಿ(reporterkarnataka news): ಕೇಂದ್ರದ ಕೃಷಿ ನೀತಿ ವಿರೋಧಿಸಿ ಎರಡು ಕೋಟಿ ರೈತರು ಸಹಿ ಮಾಡಿರುವ ಸಂಗ್ರಹವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ತಂಡ ಸಹಿ ಸಂಗ್ರಹವನ್ನು ರಾಷ್ಟ್ರಪತಿ ಅವರಿಗೆ ಸಲ್ಲಿಸಲಿದೆ.