10:10 PM Sunday29 - November 2020
ಬ್ರೇಕಿಂಗ್ ನ್ಯೂಸ್
ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಕೊಂಚಾಡಿ ಕಾಶೀ ಮಠದಲ್ಲಿ ತುಳಸಿ ಪೂಜೆ: ಪಂಚಾಮೃತ, ಕ್ಷೀರಾಭಿಷೇಕ ಸಂಪನ್ನ ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಹೈದರಾಬಾದ್ ತಲುಪಿದ ಪ್ರಧಾನಿ ಮೋದಿ: ಬಯೋಟೆಕೆ ಸಂಸ್ಥೆಗೆ ಭೇಟಿ, ವಿಜ್ಞಾನಿಗಳ ಜತೆ ಸಮಾಲೋಚನೆ 

ಇತ್ತೀಚಿನ ಸುದ್ದಿ

ಕಾಫಿ ಪೌಡರ್ ನಲ್ಲಿ ಆರ್ಟ್ ಬಿಡಿಸುವ 18ರ ಹರೆಯದ ಉದಯೋನ್ಮುಖ ಕಲಾವಿದ ಶ್ರವಣ್

November 22, 2020, 1:16 PM

ಮಂಗಳೂರು(reporterkarnataka news):

ನಾವು ಹಲವು ಬಗೆಯ ಆರ್ಟ್ ಕುರಿತು ಕೇಳಿದ್ದೇವೆ. ಆದರೆ ಕಾಫಿ ಪೌಡರ್ ನಲ್ಲಿಯೂ ಕಲೆಯ ಬಲೆ ಹಣೆಯಬಹುದು ಎಂದು ಯಾವತ್ತಾದರೂ ಯೋಚಿಸಿದ್ದೇವಾ?  ಅಂತಹ ಯೋಚನೆ ಹೊಳೆದದ್ದೇ ತಡ ಯುವ ಕಲಾವಿದನೊಬ್ಬ ಅದನ್ನು ಕಾರ್ಯರೂಪಕ್ಕೆ ತಂದಿದ್ದಾನೆ.

ಶ್ರವಣ್ ಪೂಜಾರಿ 18ರ ಹರೆಯದ ಚಿಗುರು ಮೀಸೆಯ ತರುಣ. ಮೂಡುಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ. ಈತನೇ ಕಾಫಿ ಪೌಡರ್ ಆರ್ಟ್( BRU Art) ಕಲಾವಿದ. ಮುರಗೋಳಿ, ಮಾರ್ನಾಡಿನ ನಿವಾಸಿಗಳಾದ ದಿ. ವಾಸುದೇವ ಪೂಜಾರಿ ಮತ್ತು ಸವಿತಾ ಪೂಜಾರಿ ದಂಪತಿಯ ಕಿರಿಯ ಪುತ್ರ.

ಚಿಕ್ಕ ವಯಸ್ಸಿನಿಂದಲೂ ಚಿತ್ರಕಲೆ ಎಂದರೆ ಶ್ರವಣ್

ಗೆ ಬಹಳ ಆಸಕ್ತಿ, 6ನೇ ತರಗತಿಯಲ್ಲಿ ಇರುವಾಗ ಹವ್ಯಾಸವಾಗಿ ಚಿತ್ರ ಬಿಡಿಸಲು ಪ್ರಾರಂಭಿದ್ದಾನೆ. ಹವ್ಯಾಸವಾಗಿ ಪ್ರಾರಂಭಿಸಿದ ಚಿತ್ರಕಲೆಯ ಮೂಲಕ ತಮ್ಮ ಭವಿಷ್ಯವನ್ನು ನಿರ್ಮಿಸುತ್ತೇನೆಂದು ಶ್ರವಣ್ ಆಳ್ವಾಸ್ ವಿದ್ಯಾಸಂಸ್ಥೆಯ BVA ಕೋರ್ಸ್ ಸೇರಿದ್ದಾನೆ. ನಿರಂತರ ಶ್ರದ್ಧೆ, ಪರಿಶ್ರಮ, ಕೆಲಸದಲ್ಲಿ ನಿಷ್ಠೆ ಇದ್ದರೆ

ಏನ್ನನ್ನೂ ಬೇಕಾದರು ಸಾಧಿಸಬಹುದು ಎಂದು ಶ್ರವಣ್ ಪೂಜಾರಿ ತನ್ನ ಕಲೆಯ ಮೂಲಕ ತೋರಿಸಿದ್ದಾರೆ.

ಕಾಫಿ ಹುಡಿಯಲ್ಲಿ ಮೂಡಿದ ಪೂಂಜ: ಶ್ರವಣ್ ಪೂಜಾರಿ ತನ್ನ ಕೈಚಳಕದ ಮೂಲಕ ಕಾಫಿ ಪೌಡರ್ ಆರ್ಟ್ ನಲ್ಲಿ (BRU Art) ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಭಾವಚಿತ್ರವನ್ನು ರಚಿಸಿದ್ದಾನೆ.

ಇತ್ತೀಚಿನ ಸುದ್ದಿ

ಜಾಹೀರಾತು