ಇತ್ತೀಚಿನ ಸುದ್ದಿ
ಸಿಎಂ ಮನೆಯಲ್ಲಿ ಚೌತಿ ಸಂಭ್ರಮ: ಗಣೇಶನಿಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿಶೇಷ ಪೂಜೆ
August 22, 2020, 6:52 AM

ಬೆಂಗಳೂರು(reporterkarnataka news): ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದಲ್ಲಿ ಇಂದು ಗಣೇಶ ಚತುರ್ಥಿ ಸಂಭ್ರಮ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ನಿವಾಸದಲ್ಲಿ ವಿಘ್ನ ನಿವಾರಕ ಗಣೇಶನಿಗೆ ಪೂಜೆ ಸಲ್ಲಿಸಿದರು. ಮಣ್ಣಿನಿಂದ ತಯಾರಿಸಲಾದ ಗಣೇಶ ಮೂರ್ತಿ ಗೆ ಸಿಎಂ ಯಡಿಯೂರಪ್ಪ ಆರತಿ ಬೆಳಗಿದರು.
ರಾಜ್ಯದ ಜನತೆಗೆ ಸಿಎಂ ಗಣೇಶ ಚತುರ್ಥಿಯ ಶುಭಾಶಯ ಕೋರಿದ್ದಾರೆ.