ಇತ್ತೀಚಿನ ಸುದ್ದಿ
ಚಿತ್ರಾಪುರ, ಮೀನಕಳಿ ಸಮುದ್ರ ಕೊರೆತ ಪ್ರದೇಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ
August 8, 2020, 12:53 PM

ಸುರತ್ಕಲ್(reporterkarnataka news):
ಚಿತ್ರಾಪುರ ಮತ್ತು ಬೈಕಂಪಾಡಿಯ ಮೀನಕಳಿಯ ಪ್ರದೇಶದ ಕಡಲ್ಕೊರೆತ ಪ್ರದೇಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಶನಿವಾರ ಭೇಟಿ ನೀಡಿದರು.
ಚಿತ್ರಾಪುರದಲ್ಲಿನ ರಂಗ ಮಂದಿರ, ಮೀನಕಳಿಯ ಮೀನು ಹರಾಜು ಸಭಾಂಗಣ, ಶಾಲಾ ಮೈದಾನ ಅಪಾಯದಲ್ಲಿರುವುದನ್ನು ಸಚಿವರು ಪರಿಶೀಲಿಸಿದರು.

ಸ್ಥಳೀಯ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಚಿತ್ರಾಪುರ ಮತ್ತು ಬೈಕಂಪಾಡಿ ಪ್ರದೇಶದಲ್ಲಿ ಸಮುದ್ರದ ಕೊರೆತದಿಂದ ಆಗುತ್ತಿರುವ ನಷ್ಠದ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ಶಾಶ್ವತ ಕಾಮಗಾರಿಗೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ವಿವರಿಸಿದರು. ಈಗಾಗಲೇ ಚಿತ್ರಾಪುರ ಬಳಿ 1.65 ಕೋಟಿ ರೂ. ಮತ್ತು ಮೀನಕಳಿಯದಲ್ಲಿ 1.50 ಕೋಟಿ ರೂ.ವೆಚ್ಚದಲ್ಲಿ ಸಮುದ್ರ ಕೊರೆತಕ್ಕೆ ಕಲ್ಲುಹಾಕುವ ಕಾಮಗಾರಿ ಅನುದಾನ ಮೀಸಲಿಡಲಾಗಿದೆ. ಹೆಚ್ಚುವರಿ 250 ಕೋಟಿ ರೂ. ಅನುದಾನದಲ್ಲಿ ಸರಕಾರ ಹೆಚ್ಚುವರಿ ಅನುದಾನ ನೀಡುವಂತೆ ಕಂದಾಯ ಸಚಿವ ಆರ್.ಆಶೋಕ್ ಅವರಿಗೆ ಮನವಿ ಮಾಡಿದರು.
ಉಪಮೇಯರ್ ವೇದಾವತಿ, ಕಾರ್ಪೊರೇಟರ್ ಸುಮಿತ್ರ ಕರಿಯ, ಪಣಂಬೂರು ಮೊಗವೀರ ಮಹಾಸಭಾದ ಅಧ್ಯಕ್ಷ ಮಾಧವ ಸುವರ್ಣ ಹಾಗೂ ಮಹಾಸಭಾದ ಪದಾಧಿಕಾರಿಗಳು, ಬಂದರು ಇಲಾಖೆಯ ಅಧಿಕಾರಿಗಳು, ಬಿಜೆಪಿ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.