ಇತ್ತೀಚಿನ ಸುದ್ದಿ
ಚಿನ್ನ ಕಳ್ಳ ಸಾಗಾಟ ಪ್ರಕರಣ: ಕಸ್ಟಮ್ಸ್ ತನಿಖಾಧಿಕಾರಿಗೆ ಕೊಕ್
August 31, 2020, 2:33 AM

ಕೊಚ್ಚಿ(reporterkarnataka news): ಕೇರಳದ ಚಿನ್ನ ಕಳ್ಳಸಾಗಾಟದ ತನಿಖೆ ನಡೆಸುತ್ತಿರುವ ಕಸ್ಟಮ್ಸ್ ತನಿಖಾ ಅಧಿಕಾರಿಯನ್ನು ತನಿಖೆಯ ತಂಡದಿಂದ ಕೈ ಬಿಡಲಾಗಿದೆ.
ಸ್ವಪ್ನಾ ಸುರೇಶ್ ಕಸ್ಟಂಮ್ಸ್ ಅಧಿಕಾರಿಗಳ ಮುಂದೆ ನೀಡಿದ್ದ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗಿದ್ದವು. ಇದರಲ್ಲಿ ಸಹಾಯಕ ಕಸ್ಟಂಮ್ಸ್ ಆಯುಕ್ತರೊಬ್ಬರ ಪಾತ್ರ ಇದೆ ಎಂಬ ಆರೋಪ ಕೇಳಿ ಬಂದಿತ್ತು.
ಸ್ವಪ್ನಾ ಸುರೇಶ್ ಅಧಿಕಾರಿಗಳ ಮುಂದೆ ನೀಡಿದ್ದ ಹೇಳಿಕೆ ಹೇಗೆ ಮಾಧ್ಯಮಗಳಿಗೆ ಸೋರಿಕೆಯಾಯಿತು ಎಂಬ ಬಗ್ಗೆ ಇಲಾಖಾ ಮಟ್ಟದ ತನಿಖೆಗೆ ಕೂಡ ಆದೇಶ ನೀಡಲಾಗಿದೆ.