ಇತ್ತೀಚಿನ ಸುದ್ದಿ
ದಾರಿ ತಪ್ಪಿ ಭಾರತ ಪ್ರವೇಶಿಸಿದ್ದ ಚೀನಾ ಸೈನಿಕನ ಮತ್ತೆ ಚೈನಾಕ್ಕೆ ಹಸ್ತಾಂತರ
October 21, 2020, 8:27 AM

ನವದೆಹಲಿ(reporterkarnataka news): ದಾರಿ ತಪ್ಪಿ ಭಾರತ ಪ್ರವೇಶಿಸಿದ ಚೀನಾದ ಸೈನಿಕನನ್ನು ಭಾರತ ಚೀನಾಕ್ಕೆ ಹಸ್ತಾಂತರಿಸಿದೆ. ಸೈನಿಕ ವಾಂಗ್ ಲಾ ಯಾಂಗ್ ದಾರಿ ತಪ್ಪಿ ಭಾರತ ಪ್ರವೇಶಿಸಿದ್ದ. ವಿಚಾರಣೆ ಸಂದರ್ಭದಲ್ಲಿ ಇದು ಸಾಬೀತಾಗಿತ್ತು.
ಬಳಿಕ ರಾಜತಾಂತ್ರಿಕ ಮಾರ್ಗದ ಮೂಲಕ ಈ ಮಾಹಿತಿಯನ್ನು ಚೀನಾಕ್ಕೆ ನೀಡಲಾಗಿತ್ತು. ಇದೀಗ ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಭಾರತ ಚೀನಾ ಸೈನಿಕನನ್ನು ಹಸ್ತಾಂತರಿಸಿದೆ