ಇತ್ತೀಚಿನ ಸುದ್ದಿ
ಸೈಬರ್ ಬೇಹುಗಾರಿಕೆ: ಚೀನಾದ ಕಂಪೆನಿಯಿಂದ ಸಿದ್ದರಾಮಯ್ಯ ಮಾಹಿತಿಯೂ ಸಂಗ್ರಹ, ತನಿಖೆಗೆ ಸೂಚನೆ
September 15, 2020, 8:38 AM

ನವದೆಹಲಿ(reporterkarnataka news): ಚೀನಾದ ಕಂಪೆನಿ ಭಾರತದಲ್ಲಿ ನಡೆಸಿದೆ ಎನ್ನಲಾದ ಸೈಬರ್ ಬೇಹುಗಾರಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಹಿತಿಯನ್ನು ಕೂಡ ಕಲೆಹಾಕಲಾಗಿದೆ ಎಂದು ವರದಿಯಾಗಿದೆ. ಮಾಜಿ ಪ್ರಧಾನಿ ದೇವೇಗೌಡ ಕೂಡ ಅತೀ ಗಣ್ಯರ ಪಟ್ಟಿಯಲ್ಲಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಈ ಸಂಬಂಧ ತನಿಖೆಗೆ ನಿರ್ಧರಿಸಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರಿಗೆ ಕೇಂದ್ರ ಸರ್ಕಾರ ತನಿಖೆಯ ಜವಾಬ್ದಾರಿ ವಹಿಸಿದೆ. ಚೀನಾ ಕಂಪೆನಿಗಳು ಮಾಹಿತಿ ಕಲೆ ಹಾಕಿ ಸೈಬರ್ ಬೇಹುಗಾರಿಕೆ ನಡೆಸುತ್ತಿವೆ ಎಂಬ ವರದಿ ಸೋಮವಾರ ಪ್ರಕಟವಾಗಿತ್ತು.