ಇತ್ತೀಚಿನ ಸುದ್ದಿ
ಚಿಕ್ಕಮಗಳೂರಿನಲ್ಲಿ ಈಜಲು ಹೋದ ಐವರು ಯುವಕರು ನೀರುಪಾಲು
November 25, 2020, 9:57 PM

ಚಿಕ್ಕಮಗಳೂರು(reporterkarnataka news): ಚಿಕ್ಕಮಗಳೂರು ಜಿಲ್ಲೆಯ ವಸ್ತಾರೆ ಎಂಬಲ್ಲಿರುವ ಹಿರೇ ಕೆರೆಯಲ್ಲಿ ಈಜಲು ಹೋದ ಐವರು ಯುವಕರು ನೀರು ಪಾಲಾಗಿದ್ದಾರೆ ಎಂದು ವರದಿಯಾಗಿದೆ.
ಬೀಗರ ಔತಣಕೂಟದಲ್ಲಿ ಭಾಗವಹಿಸಲು ಬಂದ ಯುವಕರು ಕೆರೆಗೆ ಈಜಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ. ರಘು, ದಿಲೀಪ್, ಸಂದೀಪ್, ದೀಪಕ್ ಮತ್ತು ಸುದೀಪ್ ನೀರು ಪಾಲಾದ ಯುವಕರಾಗಿದ್ದಾರೆ. ಎಲ್ಲರೂ 22ರಿಂದ 25 ವರ್ಷದೊಳಗಿನವರಾಗಿದ್ದಾರೆ. ನೀರು ಪಾಲಾದವರಿಗೆ ಹುಡುಕಾಟ ಮುಂದುವರಿದಿದೆ.