ಇತ್ತೀಚಿನ ಸುದ್ದಿ
ಜಿಡಿಪಿ ಕುಸಿತಕ್ಕೆ ದೇವರನ್ನು ದೂರಬೇಡಿ:ನಿರ್ಮಲಾ ಸೀತಾರಾಮನ್ಗೆ ಚಿದಂಬರಂ ವ್ಯಂಗ್ಯ
September 2, 2020, 2:36 AM

ಚೆನ್ನೈ(reporterkarnataka news): ದೇಶದ ಜಿಡಿಪಿ ಬೆಳವಣಿಗೆ ಪಾತಾಳಕ್ಕೆ ಕುಸಿದಿರುವುದಕ್ಕೆ ದೇವರನ್ನು ದೂರಬೇಡಿ. ಇದು ಮಾನವ ನಿರ್ಮಿತ ಅಪರಾಧ ಎಂದು ಮಾಜಿ ಹಣಕಾಸು ಸಚಿವ ಪಿ . ಚಿದಂಬರಂ ಕೇಂದ್ರಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಾಳೆಳೆದಿದ್ದಾರೆ.
ಜಿಡಿಪಿ ಬೆಳವಣಿಗೆ ದರ ಶೇಕಡ 24ರಷ್ಟು ಕುಸಿತವಾಗಿರುವ ಹಿನ್ನೆಲೆಯಲ್ಲಿ ಚಿದಂಬರಂ ಈ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಇದೀಗ ಅದೆಲ್ಲವನ್ನು ಕೊರೊನಾದ ಮೇಲೆ ಹೊರಿಸಿ ಪಾರಾಗಲು ಯತ್ನಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.