10:13 PM Monday25 - January 2021
ಬ್ರೇಕಿಂಗ್ ನ್ಯೂಸ್
ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ ಕಟೀಲು ಮೇಳ ಸೇವೆ ಆಟಗಳು:  ಇಂದು ಎಲ್ಲೆಲ್ಲಿ?  ನೀವೇ ನೋಡಿ ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್… ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ… ಕಾಸರಗೋಡು: ಮೆಡಿಕಲ್ ಶಾಪ್ ಗೆ ಔಷಧ ಖರೀದಿಸಲು ಬಂದ ವ್ಯಕ್ತಿಯನ್ನು ಗುಂಪೊಂದು ಥಳಿಸಿ… ಕಾಳು ಹಾಕಿ ಕೋಳಿ ಕದಿಯುವ ಭಿಕ್ಷುಕರಿದ್ದಾರೆ ಎಚ್ಚರಿಕೆ: ನಿಮ್ಮ ಮನೆಗೂ ಬಂದಾರು ಜೋಕೆ!… ವಿವಾದಾತ್ಮಕ ವಾಟ್ಸಾಪ್ ಚಾಟ್ : ಮಹಾರಾಷ್ಟ್ರ ಸರಕಾರದಿಂದ ಅರ್ನಾಬ್ ಮತ್ತೆ ಬಂಧನ ಸಾಧ್ಯತೆ

ಇತ್ತೀಚಿನ ಸುದ್ದಿ

ಚಾರ್ಮಾಡಿಯಲ್ಲಿ  ಭಾರಿ ಗುಡ್ಡ ಕುಸಿತ: ಬಸ್ ಸಂಚಾರ ಸ್ಥಗಿತ

August 7, 2020, 12:53 PM

ಮಂಗಳೂರು(reporterkarnataka news):

ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಶುಕ್ರವಾರ

ಗುಡ್ಡ ಕುಸಿತವಾಗಿದ್ದು, ಮಂಗಳೂರು ಹಾಗೂ ಚಿಕ್ಕಮಗಳೂರು ನಡುವೆ ಸಂಪರ್ಕ ಕಡಿದು ಹೋಗಿದೆ.

ಭಾರಿ ಮಳೆ ಪರಿಣಾಮ ಬುಧವಾರ ಕೊಡಗಿನ ಕೆಲವು ಕಡೆಗಳಲ್ಲಿ ಭೂ ಕುಸಿತ ಉಂಟಾಗಿತ್ತು. ಇದರ ಬೆನ್ನಿಗೆ ಕೇರಳದ ವಯನಾಡು ಪ್ರದೇಶ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಚಾರ್ಮಾಡಿ ಪ್ರದೇಶದಲ್ಲಿ ಗುಡ್ಡ ಕುಸಿತ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಚಾರ್ಮಾಡಿ ಘಾಟಿಯಾಗಿ ತೆರಳುವ ಎಲ್ಲ ಕೆಎಸ್ಸಾರ್ಟಿಸಿ ಬಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮಂಗಳೂರಿನಿಂದ ಚಾರ್ಮಾಡಿಯಾಗಿ ಚಿಕ್ಕಮಗಳೂರಿಗೆ ತೆರಳಲು ಹೊರಟಿದ್ದ ಬಸ್ ಗಳು ವಾಪಸ್ ಬಂದಿವೆ.

ಕಳೆದ ವರ್ಷ ಇದೇ ಸಮಯದಲ್ಲಿ ಕೊಡಗು ಹಾಗೂ ಚಾರ್ಮಾಡಿ ಪ್ರದೇಶದಲ್ಲಿ ಭೀಕರ ಗುಡ್ಡ ಕುಸಿತ ಉಂಟಾಗಿತ್ತು. ಕೊಡಗಿನಲ್ಲಿ ಭೂ  ಕುಸಿತ ಕಂಡ ಬೆನ್ನಲ್ಲೇ ಕೇರಳ ಹಾಗೂ ಚಾರ್ಮಾಡಿಯಲ್ಲಿ ಭೂ ಕುಸಿತ ಉಂಟಾಗಿತ್ತು. ಈ ವರ್ಷವೂ ಅದರ ಪುನರಾವರ್ತನೆಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು