10:53 AM Sunday17 - January 2021
ಬ್ರೇಕಿಂಗ್ ನ್ಯೂಸ್
ಇಟಗಿಹಾಳ: ಮಧ್ಯದಂಗಡಿ ತೆರವಿಗೆ ಆಗ್ರಹಿಸಿ 3ನೇ ಬಾರಿ ಗ್ರಾಮಸ್ಥರಿಂದ ಭಾರಿ ರಸ್ತೆ ತಡೆ… ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ವಿವೇಕಾ ಸಂದೇಶ 2021’ ಕಾರ್ಯಕ್ರಮ ರಾಜ್ಯದ ಎಲ್ಲ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ಭದ್ರಾವತಿ: ಕ್ಷಿಪ್ರ ಕಾರ್ಯಪಡೆ ಕಚೇರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೂಮಿ… ಕೊರೊನಾ ತಡೆಗೆ ಸ್ವದೇಶಿ ವ್ಯಾಕ್ಸಿನ್ ಭಾರತದ ಸಾಧನೆಯ ಪ್ರತೀಕ: ಪ್ರಧಾನಿ ನರೇಂದ್ರ ಮೋದಿ ಲಿಂಗಸುಗೂರು: ಕೋವಿಡ್ 19 ಲಸಿಕೆ ಬಾಕ್ಸ್ ಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡ ತಾಲೂಕು… ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿ ಸ್ಥಾನ: ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಎಸ್.… ಮಲ್ಪೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ನಿಂದ ಬಿದ್ದು ಮೀನುಗಾರ ಸಾವು ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಮಹಿಳಾ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋಲಾರ ಜಿಲ್ಲಾಧಿಕಾರಿ… ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ  ದೇರಳಕಟ್ಟೆ ರೆಂಜಡಿಯ ಡಾ. ಅಬ್ದುಲ್ ಶಕೀಲ್ ನೇಮಕ

ಇತ್ತೀಚಿನ ಸುದ್ದಿ

ಸಿಇಟಿ ಪರೀಕ್ಷೆ: ಆಗಸ್ಟ್ 20ರಂದು ಫಲಿತಾಂಶ ಪ್ರಕಟ

August 17, 2020, 3:07 PM

ಮಂಗಳೂರು(reporterkarnataka news): ಕರ್ನಾಟಕ ಪರೀಕ್ಷೆ ಪ್ರಾಧಿಕಾರದಿಂದ ನಡೆದ ಸಿಇಟಿ(ಸಾಮಾನ್ಯ ಪ್ರವೇಶ ಪರೀಕ್ಷೆ) ಫಲಿತಾಂಶ ಆಗಸ್ಟ್ 20ರಂದು ಪ್ರಕಟವಾಗಲಿದೆ.

ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಾದ ಅಶ್ವತ್ಥ ನಾರಾಯಣ ಅವರು ಈ ಕುರಿತು ಮಾಹಿತಿ ಮಾಡಿದ್ದಾರೆ.

ರಾಜ್ಯಾದ್ಯಂತ ಪರೀಕ್ಷೆ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ17 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಕೇರಳದಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೇರಳದೊಂದಿಗೆ ಹಂಚಿಕೊಂಡಿರುವ ಎಲ್ಲ ಗಡಿಗಳನ್ನು ಮುಚ್ಚಿರುವ ಪರಿಣಾಮ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಯಿತ್ತು.

ತಲಪಾಡಿ ಗಡಿ ಮೂಲಕ ಮಂಗಳೂರಿನ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಲು 400 ವಿದ್ಯಾರ್ಥಿಗಳನ್ನು ಬಸ್ ಮೂಲಕ ನಗರದ ವಿವಿಧ ಪರೀಕ್ಷೆ ಕೇಂದ್ರಗಳಿಗೆ ಕರೆದು ತರಲಾಯಿತ್ತು. ಅದೇ ರೀತಿ ಸಾರಡ್ಕದಿಂದ ಪುತ್ತೂರಿನ ಪರೀಕ್ಷೆ ಕೇಂದ್ರಕ್ಕೆ ಆಗಮಿಸಲು 45 ವಿದ್ಯಾರ್ಥಿಗಳಿಗೆ ಹಾಗೂ ಪಂಜಿಕಲ್ಲಿನಿಂದ ಸುಳ್ಯದ ಪರೀಕ್ಷೆ ಕೇಂದ್ರಕ್ಕೆ ಬರಲು 11 ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ಬಸ್ ವ್ಯವಸ್ಥೆ ಮಾಡಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು