ಇತ್ತೀಚಿನ ಸುದ್ದಿ
ಸಿಸಿಬಿ ವಿಚಾರಣೆ ವೇಳೆ ನಟಿ ಸಂಜನಾ ಹಲವರ ಹೆಸರು ಬಹಿರಂಗಪಡಿಸಿದರೇ ?
September 10, 2020, 4:39 PM

ಬೆಂಗಳೂರು(reporterkarnataka news): ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧನಕ್ಕೀಡಾಗಿರುವ ಚಿತ್ರನಟಿ ಸಂಜನಾ ಅವರು ಡ್ರಗ್ಸ್ ಸೇವನೆ ಕುರಿತು ತಪ್ಪೊಪ್ಪಿಕೊಳ್ಳುವ ಜತೆಗೆ ಕೆಲವು ರಾಜಕಾರಣಿ, ಉದ್ಯಮಿ ಹಾಗೂ ನಟ- ನಟಿಯರು ಸೇರಿದಂತೆ 24 ಮಂದಿ ಮಾದಕ ವ್ಯಸನಿಗಳ ಕುರಿತು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧನಕ್ಕೀಡಾಗಿರುವ ಚಿತ್ರನಟಿ ಸಂಜನಾ ಅವರು ಡ್ರಗ್ಸ್ ಸೇವನೆ ಕುರಿತು ತಪ್ಪೊಪ್ಪಿಕೊಳ್ಳುವ ಜತೆಗೆ ಕೆಲವು ರಾಜಕಾರಣಿ, ಉದ್ಯಮಿ ಹಾಗೂ ನಟ- ನಟಿಯರು ಸೇರಿದಂತೆ 24 ಮಂದಿ ಮಾದಕ ವ್ಯಸನಿಗಳ ಕುರಿತು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಪಾರ್ಟಿಗಳಲ್ಲಿ ಮದ್ಯ ಸೇವನೆ ಸಾಮಾನ್ಯವಾಗಿದೆ. ಮೊದ ಮೊದಲು ನನಗೆ ಡ್ರಗ್ಸ್ ಚಟ ಇರಲಿಲ್ಲ. ರಾಹುಲ್ ಹಾಗೂ ಆತನ ಗೆಳೆಯರ ಸ್ನೇಹವಾದ ಬಳಿಕ ವ್ಯಸನ ಶುರುವಾಯಿತು. ಪಾರ್ಟಿ ಸಂಭ್ರಮದಲ್ಲಿ ಅರಿಯದೆ ಡ್ರಗ್ಸ್ ಸೇವಿಸುತ್ತಿದ್ದೆ ಎಂದು ಸಿಸಿಬಿ ಅಧಿಕಾರಿಗಳ ಮುಂದೆ ಸಂಜನಾ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ನನಗೆ ಗೊತ್ತಿರುವಂತೆ ಸುಮಾರು ನಟ-ನಟಿಯರು ಡ್ರಗ್ಸ್ ಸೇವಿಸುತ್ತಾರೆ. ಈ ಪಾರ್ಟಿಗಳಿಂದ ನನಗೆ ಡ್ರಗ್ಸ್ ಸೆಳೆತ ಪ್ರಾರಂಭವಾಯಿತು. ಮನೆಯಲ್ಲಿ ನಡೆದ ಪಾರ್ಟಿಗಳಲ್ಲಿಯೂ ಡ್ರಗ್ಸ್ ಬಳಕೆಯಾಗಿದೆ ಎಂದು ಸಂಜನಾ ಹೇಳಿದ್ದಾರೆ ಎನ್ನಲಾಗಿದೆ.
ರಾಹುಲ್, ವೀರೇನ್, ರಂಕಾ, ನಿಯಾಜ್ ಸೇರಿ ಕೆಲವರ ಸ್ನೇಹ ಮಾಡಿ ನಾನು ತಪ್ಪು ಮಾಡಿದೆ. ಬೆಂಗಳೂರು ಮಾತ್ರವಲ್ಲದೆ ವಿದೇಶಗಳಲ್ಲಿ ರಾಹುಲ್ ಹಾಗೂ ವೀರೇನ್ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ನಾನು ತಪ್ಪದೆ ಭಾಗವಹಿಸುತ್ತಿದ್ದೆ. ನನಗೆ ಅವರು ಆತ್ಮೀಯ ಸ್ನೇಹಿತರು. ಈ ಗೆಳೆತನದಲ್ಲೇ ನಡೆದ ಸಂಭ್ರಮ ಕೂಟಗಳಲ್ಲಿ ಅರಿಯದೆ ಡ್ರಗ್ಸ್ ಸೇವಿಸಿದೆ ಎಂದು ಸಂಜನಾ ಹೇಳಿದ್ದಾರೆ ಎನ್ನಲಾಗಿದೆ.