ಇತ್ತೀಚಿನ ಸುದ್ದಿ
Big News : ಸಿಸಿಬಿ ಇನ್ಸ್ಪೆಕ್ಟರ್ ವರ್ಗಾವಣೆಗೆ ಬ್ರೇಕ್ : ಹಠಾತ್ ನಿರ್ಧಾರಕ್ಕೆ ಏನು ಕಾರಣ?
October 3, 2020, 2:37 PM

ಮಂಗಳೂರು(reporterkarnataka news):
ಡ್ರಗ್ಸ್ ಜಾಲ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿರುವಾಗಲೇ ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರನ್ನು ವರ್ಗಾವಣೆ ಮಾಡುವ ಆದೇಶಕ್ಕೆ ತಡೆ ಹಿಡಿಯಲಾಗಿದೆ. ಇದನ್ನು ತಾತ್ಕಾಲಿಕ ತಡೆ ಎಂದು ವ್ಯಾಖ್ಯಾನಿಸಲಾಗಿದೆ.
ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ವರ್ಗಾವಣೆಗೆ ಇದೀಗ ತಡೆ ಹೇರಲಾಗಿದೆ. ಮಾದಕ ದ್ರವ್ಯ ಜಾಲ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಸಿಬಿ ಇನ್ಸ್ ಪೆಕ್ಟರ್ ಅವರನ್ನು ಒತ್ತಡಕ್ಕೆ ಮಣಿದು ವರ್ಗ ಮಾಡಲಾಗಿದೆ ಎಂದು ಭಾವನೆ ಸಾರ್ವಜನಿಕರಲ್ಲಿ ಉಂಟಾಗ ಬಾರದು ಎನ್ನುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಕಾಪು ಠಾಣೆ ಇನ್ಸ್ ಪೆಕ್ಟರ್ ಆಗಿದ್ದ ಮಹೇಶ್ ಪ್ರಸಾದ್ ಅವರನ್ನು ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಆಗಿ ನೇಮಕ ಮಾಡಲಾಗಿತ್ತು.