ಇತ್ತೀಚಿನ ಸುದ್ದಿ
ಕಾರಿನಲ್ಲೇ ಮೂರ್ಚೆ ಹೋದ ಕೇಂದ್ರ ಸಚಿವ ಸದಾನಂದ ಗೌಡ: ನಡೆದದ್ದು ಏನು ಗೊತ್ತೇ?
January 3, 2021, 4:39 PM

ಚಿತ್ರದುರ್ಗ(reporterkarnataka news): ಕೇಂದ್ರ ಸಚಿವ ಸದಾನಂದ ಗೌಡ ಅವರು ಮೂರ್ಚೆ ಹೋದ ಘಟನೆ ಭಾನುವಾರ ನಡೆದಿದೆ.
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಚಿತ್ರದುರ್ಗದ ಬಿಜೆಪಿ ಮುಖಂಡ ರೊಬ್ಬರ ಮಾಲೀಕತ್ವದ ರೆಸಿಡೆನ್ಸಿಗೆ ಭೇಟಿ ನೀಡಲು ತೆರಳಿದ್ದರು. ಹೋಟೆಲ್ ಎದುರು ಕಾರು ನಿಲ್ಲಿಸಿ ಇನ್ನೇನು ಸಚಿವರು ಕಾರು ಇಳಿದು ಹೋಗ ಬೇಕೆನ್ನುವಷ್ಟರಲ್ಲಿ ಮೂರ್ಚೆ ಹೋದರು. ಕಾರಿನ ಎದುರು ಸೀಟಿನಲ್ಲಿ ಕುಳಿತ್ತಿದ್ದ ಅವರ ರಕ್ಷಣೆಗೆ ತಕ್ಷಣ ಅಂಗರಕ್ಷಕರು ಧಾವಿಸಿದರು. ಫಿಟ್ಸ್ ಕಾಯಿಲೆಯಿಂದ ಮೂರ್ಚೆ ಹೋಗಿದ್ದಾರೆ ಎನ್ನಲಾಗಿದೆ. ತಕ್ಷಣ ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಯಿತು.