ಇತ್ತೀಚಿನ ಸುದ್ದಿ
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಮಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಹಾಕಿದ ಆರೋಪಿ ಬಂಧನ
August 19, 2020, 3:34 PM

ಮಂಗಳೂರು(reporterkarnataka news):
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಡಲಾಗಿದೆ ಎಂದು ಹುಸಿ ಬೆದರಿಕೆ ಕರೆ ಮಾಡಿದ ಆರೋಪಿ
ಕಾರ್ಕಳದ ಮುದ್ರಾಡಿ ಸಮೀಪದ ನಿವಾಸಿ ವಸಂತ(33) ಎಂಬಾತನನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಮುದ್ರಾಡಿಯ ಬಲ್ಲಾಡಿ ತುಂಡುಗುಡ್ಡೆ ನಿವಾಸಿಯಾದ ಆರೋಪಿಯನ್ನು ಆತನ ಮನೆಯಲ್ಲೇ ಬುಧವಾರ ಬಂಧಿಸಲಾಯಿತು. ಆರೋಪಿಸಿ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ.
ಬಾಂಬ್ ಬೆದರಿಕೆಯ ಕರೆಯ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಜಪೆ ಪೊಲೀಸರು ಹೆಬ್ರಿ ಠಾಣೆ ಸಿಬ್ಬಂದಿ ಹಾಗೂ ಸಿಸಿಬಿ ತಂಡದೊಂದಿಗೆ ಸಂಯುಕ್ತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಹಿಂದೆ ಆದಿತ್ಯ ರಾವ್ ಎಂಬಾತ ಬಾಂಬ್ ಮಾದರಿಯ ವಸ್ತುವನ್ನಿಟ್ಟು ಆತಂಕ ಸೃಷ್ಟಿಸಿದ್ದ.