ಇತ್ತೀಚಿನ ಸುದ್ದಿ
ಭಿವಂಡಿಯಲ್ಲಿ ಕಟ್ಟಡ ಕುಸಿತ: ಮೃತರ ಸಂಖ್ಯೆ 33ಕ್ಕೆ ಅವಶೇಷದಡಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆ
September 23, 2020, 9:13 AM

ಮುಂಬೈ(reporterkarnataka news): ಮಹಾರಾಷ್ಟ್ರದ ಭಿವಂಡಿಯಲ್ಲಿ ಸಂಭವಿಸಿದ ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 33ಕ್ಕೆ ಏರಿದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಕೆಲವು ಸಿಲುಕಿರುವ ಶಂಕೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ.
ಭಿವಂಡಿಯಲ್ಲಿರುವ ಪಟೇಲ್ ಕಂಪೌಂಡ್ ನಲ್ಲಿದ್ದ ಮೂರು ಅಂತಸ್ತಿನ ಕುಟ್ಟಡ ಕುಸಿದು ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದಾರೆ.