ಇತ್ತೀಚಿನ ಸುದ್ದಿ
ಬ್ರಿಟಿಷರ ಕಾಲದ ಮದ್ದಿನ ಮನೆ ಅವನತಿಯಂಚಿನಲ್ಲಿ: ರಕ್ಷಣೆಗೆ ಕೇಳಿ ಬರುತ್ತಿದೆ ಒಕ್ಕೊರಲಿನ ಹಕ್ಕೊತ್ತಾಯ
December 11, 2020, 10:07 AM

ಅಮರೇಶ ಲಿಂಗಸಗೂರು
info.reporterkarnataka@gmail.com
ಲಿಂಗಸಗೂರು(reporterkarnataka news): ಇಲ್ಲಿನ
ಬಸ್ ನಿಲ್ದಾಣ ಸಮೀಪ ರಾಯಚೂರು ರಸ್ತೆಯಲ್ಲಿರುವ ಈ ಐತಿಹಾಸಿಕ ಕಟ್ಟಡ ಅವನತಿಯಂಚಿಗೆ ತಲುಪಿದೆ. ಗುಂಬಜ್ ಹೊಂದಿರುವ ಈ ಪುಟ್ಟ ಕಟ್ಟಡವನ್ನು ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿತ್ತು. ಮದ್ದುಗುಂಡು ಸಂಗ್ರಹಿಸಿಡುವ ಉದ್ದೇಶದಿಂದ ಅಂದಿನ ಬ್ರಿಟಿಷ್ ಆಡಳಿತ ಇದನ್ನು ನಿರ್ಮಿಸಿತ್ತು.
ಅಲ್ಲಮಪ್ರಭು ನರ್ಸಿಂಗ್ ಕಾಲೇಜಿನ ಬಲ ಭಾಗದ ಪೆಟ್ರೋಲ್ ಬಂಕಿನ ಹಿಂಭಾಗದಲ್ಲಿ ಮದ್ದಿನ ಮನೆ ಎಂದೇ ಖ್ಯಾತಿ ಪಡೆದಿರುವ
ಮದ್ದುನ ಘಾಟ್ ಇದೆ. ಅದರೆ ಇಂದು ಈ ಐತಿಹಾಸಿಕ ಕಟ್ಟಡ ಕಂಡವರ ಪಾಲಾಗುತ್ತಿದೆ. ಕೆಲವೆ ದಿನಗಳಲ್ಲಿ ನೆಲಸಮವಾದರೂ ಅಚ್ಚರಿಪಡಬೇಕಾಗಿಲ್ಲ.
ಈ ಮದ್ದಿನ ಮನೆಯನ್ನು ಆದಷ್ಟು ಬೇಗನೆ ತಾಲೂಕು ಆಡಳಿತ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಉಳಿಸಿ, ರಕ್ಷಿಸುವ ಕೆಲಸ ಮಾಡಬೇಕೆನ್ನುವುದು ಇಲ್ಲಿನ ನಾಗರಿಕರ ಹಕ್ಕೊತ್ತಾಯವಾಗಿದೆ.
ಬ್ರಿಟಿಷರ ಕಾಲದ ಆಳಿವಿನ ಅಂಚಿನಲ್ಲಿರುವ ಉಳಿಸಿಕೊಳ್ಳಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ ಎಂದು ಜನರ ಆಸೆ ಆಗಿದೆ.