ಇತ್ತೀಚಿನ ಸುದ್ದಿ
ಬ್ರಿಟನ್ ಹೊಸ ತಳಿಯ ವೈರಸ್: ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣದ ಮೇಲೆ ತೀವ್ರ ನಿಗಾ
December 26, 2020, 2:42 PM

ಬೆಂಗಳೂರು(reporterkarnataka news): ಬ್ರಿಟನ್ ನಲ್ಲಿ ಕಂಡು ಬಂದ ಹೊಸ ತಳಿಯ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳ ಮೇಲೆ ನಿಗಾ ಇಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯಕ್ಕೆ ಐರೋಪ್ಯ ರಾಷ್ಟ್ರಗಳಿಂದ ಬಂದವರಿಗೆ ಆರ್ ಟಿಪಿಸಿ ಟೆಸ್ಟ್ ಕಡ್ಡಾಯವಾಗಿದೆ. ಹೊರ ದೇಶಗಳಿಂದ ಬರುವವರ ಮೇಲೆ ನಿಗಾ ಇಡಲಾಗಿದೆ. ಈಗಾಗಲೇ ರಾಜ್ಯಕ್ಕೆ ಬಂದವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಮಾಧ್ಯಮ ಜತೆ ಮಾತನಾಡಿದ ಗೃಹ ಸಚಿವರು ತಿಳಿಸಿದರು.