ಇತ್ತೀಚಿನ ಸುದ್ದಿ
ಬ್ರೆಜಿಲ್ ನಲ್ಲಿ ಕೊರೊನಾಕ್ಕೆ ಒಂದೇ ದಿನ 1090 ಮಂದಿ ಬಲಿ: ವಿಶ್ವದಲ್ಲೇ ಎರಡನೇ ಸ್ಥಾನ
August 27, 2020, 4:57 AM

ವಾಷಿಂಗ್ಟನ್(Reporter Karnataka News): ಬ್ರೆಜಿಲ್ ನಲ್ಲಿ ಕೊರೊನಾದ ಅಬ್ಬರ ಮುಂದುವರಿದಿದೆ. ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ವಿಶ್ವದಲ್ಲಿ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಕಳೆದ 24 ಗಂಟೆ ಅವಧಿಯಲ್ಲಿ ಕೊರೊನಾದಿಂದ ಬ್ರೆಜಿಲ್ ನಲ್ಲಿ 1090 ಮಂದಿ ಮೃತಪಟ್ಟಿದ್ದಾರೆ. ಹೊಸದಾಗಿ 47, 828 ಮಂದಿಗೆ ಸೋಂಕು ತಗುಲಿದೆ.
ಅಮೆರಿಕದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಕೊರೊನಾ ಅಮೆರಿಕದಲ್ಲಿ 1277 ಮಂದಿಯ ಬಲಿ ಪಡೆದಿದೆ. ಹೊಸದಾಗಿ 43, 948 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ವಿಶ್ವದಲ್ಲಿ ಭಾರತದಲ್ಲಿ ಕೊರೊನಾ ಅತ್ಯಧಿಕ ವೇಗವಾಗಿ ವ್ಯಾಪಿಸುತ್ತಿದೆ.