ಇತ್ತೀಚಿನ ಸುದ್ದಿ
ಕೊಡಗು ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ: ಅರ್ಚಕ ನಾರಾಯಣಾಚಾರ್ ಎರಡೂ ಕಾರು ಪತ್ತೆ
August 11, 2020, 6:33 AM

ಮಡಿಕೇರಿ(reporterkarnatakanews): ಕೊಡಗಿನ ಭಾಗಮಂಡಲದ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ನಾಪತ್ತೆಯಾಗಿರುವ ನಾರಾಯಣಾಚಾರ್ ಗೆ ಸೇರಿದ ಎರಡು ಕಾರುಗಳನ್ನು ಪತ್ತೆ ಹಚ್ಚಲಾಗಿದೆ.
ಡಸ್ಟರ್ ಮತ್ತು ಒಮ್ನಿ ಕಾರನ್ನು ಮಣ್ಣಿನಡಿಯಿಂದ ಪತ್ತೆ ಹಚ್ಚಲಾಗಿದೆ. ಆದರೆ ಇದುವರೆಗೆ ನಾಪತ್ತೆಯಾಗಿರುವ ನಾರಾಯಣಾಚಾರ್ ಮತ್ತು ಇತರ ಮೂರು ಮಂದಿಯ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.
ಶೋಧ ಕಾರ್ಯಾಚರಣೆ ಭರದಿಂದ ಮುಂದುವರಿದಿದೆ.. ಇಂದು ಸಂಜೆಯೊಳಗೆ ನಾಪತ್ತೆಯಾಗಿರುವ ಎಲ್ಲರನ್ನು ಪತ್ತೆ ಹಚ್ಚುವ ಆತ್ಮ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಹಿಟಾಚಿ ಯಂತ್ರಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದೆ.