ಇತ್ತೀಚಿನ ಸುದ್ದಿ
ಮಾರಕ ಕೊರೊನಾಕ್ಕೆ ಬಿಜೆಪಿ ಶಾಸಕಿ ಬಲಿ
November 30, 2020, 9:14 AM

ನವದೆಹಲಿ(reporterkarnataka news): ಮಾರಕ ಕೊರೊನಾ ರಾಜಸ್ತಾನದಲ್ಲಿ ಬಿಜೆಪಿ ಶಾಸಕಿಯನ್ನು ಬಲಿಪಡೆದುಕೊಂಡಿದೆ. ರಾಜಸ್ತಾನದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ಕೊರೋನಾದಿಂದ ಮೃತಪಟ್ಟಿದ್ದಾರೆ.
ಗುರು ಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರು ಎಳೆದಿದ್ದಾರೆ. ಕಿರಣ್ ಮಹೇಶ್ವರಿ ರಾಜಸ್ತಾನದ ರಜಸಮಂಡ್ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದರು