ಇತ್ತೀಚಿನ ಸುದ್ದಿ
ಬಿಜೆಪಿ ಸೇರಲಿರುವ ಸಿಂಗಂ : ತಮಿಳುನಾಡು ರಾಜಕೀಯಕ್ಕೆ ಅಣ್ಣಾಮಲೈ ಎಂಟ್ರಿ
August 25, 2020, 3:33 AM

ನವದೆಹಲಿ(Reporter Karnataka News)
ಐಪಿಎಸ್ ಹುದ್ದೆಗೆ ರಾಜಿನಾಮೆ ನೀಡಿದ್ದ ದಕ್ಷ ಅಧಿಕಾರಿ ಪಿ.ಎಸ್.ಅಣ್ಣಾಮಲೈ ರಾಜಕೀಯಕ್ಕೆ ಸೇರುವ ಹಾಗೂ 2021ರ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸುವ ಮಾತುಗಳು ಕೇಳಿ ಬರುತ್ತಿತ್ತು. ಈಗ ಈ ಊಹಾಪೋಹಗಳಿಗೆ ಬಹುತೇಕ ಸ್ಪಷ್ಟನೆ ದೊರೆತಿದ್ದು ಅವರು ಬಿಜೆಪಿ ಸೇರುವುದು ಖಚಿತವಾಗಿದೆ.
ಈಗಾಗಲೇ ದೆಹಲಿ ತಲುಪಿರುವ ಸಿಂಗಂ ಅಣ್ಣಾಮಲೈ 11ಗಂಟೆಗೆ ಪಕ್ಷದ ರಾಷ್ಟ್ರಾಧ್ಯಕ್ಷರಾದ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.
ಬಿಜೆಪಿ ರಾಷ್ಟ್ರೀಯವಾದಿ ಪಕ್ಷ, ನಾನು ಕೂಡ ಅದೇ ನಿಲುವು ಹೊಂದಿದ್ದೇನೆ ಎಂದಿರುವ ಅಣ್ಣಾಮಲೈ ಕರ್ನಾಟಕದಲ್ಲಿ ಜನಪ್ರಿಯ ಅಧಿಕಾರಿಯಾಗಿದ್ದರು. ಚಿಕ್ಕಮಗಳೂರಿನಲ್ಲಿ ಎಸ್ಪಿ, ಬೆಂಗಳೂರಿನಲ್ಲಿ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು ಬಳಿಕ ಸ್ವಯಂ ನಿವೃತ್ತಿಯನ್ನು ಹೊಂದಿದ್ದರು.