ಇತ್ತೀಚಿನ ಸುದ್ದಿ
ಬಿಜೆಪಿಯಿಂದ ಇಡೀ ಆರ್ಥಿಕ ವ್ಯವಸ್ಥೆ ನಾಶ: ಮಾಜಿ ಶಾಸಕ ಜೆ.ಆರ್. ಲೋಬೊ ಟೀಕೆ
September 5, 2020, 1:41 PM

ಮಂಗಳೂರು(reporterkarnataka news):
ಕರಾವಳಿ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಶ್ರೀನಿವಾಸ ಮಲ್ಯ, ಡಾ. ಟಿ.ಎಂ.ಎ. ಪೈ, ಜನಾರ್ಧನ ಪೂಜಾರಿ ಮುಂತಾದ ಮಹನೀಯರು ಸಾಕಷ್ಟು ದುಡಿದಿದ್ದಾರೆ. ಆದರೆ ಬಿಜೆಪಿಯು ಇಡೀ ಆರ್ಥಿಕ ವ್ಯವಸ್ಥೆಯನ್ನು ಸರ್ವನಾಶ ಮಾಡುತ್ತಿದೆ ಎಂದು ಮಾಜಿ ಶಾಸಕ ಜೆ. ಆರ್. ಲೋಬೊ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮ ಜತೆ ಮಾತನಾಡಿದ ಅವರು, ರಾಜ್ಯ ಕರಾವಳಿ ಪ್ರದೇಶಕ್ಕೆ ಸೀಮಿತವಾಗಿರುವ ಕಮಿಷನರ್ ಆಫ್ ಇನ್ ಕಮ್ ಟ್ಯಾಕ್ಸ್ ಕಚೇರಿಯನ್ನು ಸ್ಥಳಾಂತರ ಮಾಡಲು ಅಧಿಕೃತ ನಿರ್ಣಯ ಕೈಗೊಳ್ಳಲಾಗಿದೆ.
ಗೋವಾ ಹಾಗೂ ಕರ್ನಾಟಕ ರಾಜ್ಯ ಕರಾವಳಿ ಪ್ರದೇಶಕ್ಕೆ ಸೀಮಿತವಾಗಿರುವ ಕಚೇರಿಯನ್ನು ಗೋವಾದ ಪಣಜಿಗೆ ವರ್ಗಾವಣೆ ಮಾಡಲು ಈಗಾಗಲೇ ಅಧಿಕೃತ ಪ್ರಕಟಣೆ ಮಾಡಲಾಗಿದೆ ಎಂದರು.
ಗೋವಾಕ್ಕೆ ಹೋಲಿಸಿದರೆ ದ.ಕ. ಜಿಲ್ಲೆಯಲ್ಲಿ ಕೈಗಾರಿಕೆ, ವ್ಯಾಪಾರ ಅಧಿಕ ಪ್ರಮಾಣದಲ್ಲಿದೆ.
ಇಂತಹ ಕೇಂದ್ರದಲ್ಲಿರುವ ಕಚೇರಿಯನ್ನು ಪಣಜಿಗೆ ವರ್ಗಾಯಿಸಬೇಕಾದರೆ ಇದರ ಹಿಂದೆ ಇರುವ ಕಾರಣ ಹಾಗೂ ಕೈವಾಡ ಯಾರದ್ದು? ಯಾವ ಕಾರಣಕ್ಕಾಗಿ ವರ್ಗಾಯಿಸಬೇಕು ಎಂದು ಅವರು
ಪ್ರಶ್ನಿಸಿದರು.