ಇತ್ತೀಚಿನ ಸುದ್ದಿ
ಗಡಿ ಉದ್ವಿಗ್ನತೆ: ಮುಂಚೂಣಿ ಸೇನಾ ನೆಲೆಗಳಿಗೆ ಜನರಲ್ ಬಿಪಿನ್ ರಾವತ್ ಭೇಟಿ
October 11, 2020, 8:29 AM

ಶ್ರೀನಗರ(reporter Karnataka News): ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಜಮ್ಮು ಕಾಶ್ಮೀರದ ಮುಂಚೂಣಿ ಸೇನಾ ನೆಲೆಗಳಿಗೆ ಇಂದು ಭೇಟಿ ನೀಡಲಿದ್ದಾರೆ. ಈಗಾಗಲೇ ಉಧಂಪುರ ತಲುಪಿರುವ ಬಿಪಿನ್ ರಾವತ್ , ಇಂದು ಲೆಫ್ಟಿನೆಂಟ್ ಜನರಲ್ ಜೋಷಿ ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಲಿದ್ದಾರೆ.
ಭಾರತ- ಚೀನಾ ಗಡಿಯಲ್ಲಿನ ಪ್ರಸಕ್ತ ಪರಿಸ್ಥಿತಿ ಹಾಗೂ ಸವಾಲು ಎದುರಿಸಲು ಭಾರತದ ಸನ್ನದ್ದತೆ ಕುರಿತು ಅವರು ಸೇನಾ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ.
ಇನ್ನು ಕೆಲವು ದಿನಗಳಲ್ಲಿ ಚಳಿಗಾಲ ಆರಂಭವಾಗಲಿದ್ದು, ಇದು ಹೊಸ ಸವಾಲಾಗಿದೆ. ಚಳಿಗಾಲ ಎದುರಿಸಲು ಭಾರತ ಅಗತ್ಯ ಸಿದ್ದತೆ ಮಾಡಿಕೊಂಡಿದೆ.