ಇತ್ತೀಚಿನ ಸುದ್ದಿ
ಬಿಗ್ ಬಾಸ್ ಮನೆಗೆ ಹಳ್ಳಿಹಕ್ಕಿಯ ಖ್ಯಾತಿಯ ಮಾಜಿ ಸಚಿವ ಎಚ್. ವಿಶ್ವನಾಥ್?
December 17, 2020, 3:29 PM

ಬೆಂಗಳೂರು(reporterkarnataka news): ಹಳ್ಳಿ ಹಕ್ಕಿ ಖ್ಯಾತಿಯ ಎಚ್ ವಿಶ್ವನಾಥ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ. ಬಿಗ್ ಬಾಸ್ ಕಾರ್ಯಕ್ರಮದ ಆಯೋಜಕರು ಅವರನ್ನು ಈಗಾಗಲೇ ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಎಚ್ ವಿಶ್ವನಾಥ್ ಸಚಿವರಾಗಲು ಅನರ್ಹರಾಗಿದ್ದಾರೆ ಎಂದು ರಾಜ್ಯ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಆ ಬಳಿಕ ಅವರು ಬಿಜೆಪಿ ನಾಯಕರ ವಿರುದ್ದ ಮುನಿಸಿಕೊಂಡಿದ್ದರು.
ಚುನಾವಣೆ ಸಂದರ್ಭದಲ್ಲಿ ಎಚ್ ವಿಶ್ವನಾಥ್ ಅವರದ್ದು ಎನ್ನಲಾದ ಆಡಿಯೋ ಸಂದೇಶ ವೈರಲ್ ಆಗಿತ್ತು.