ಇತ್ತೀಚಿನ ಸುದ್ದಿ
ಬೀದರ್ ನಲ್ಲಿ ಭಾರೀ ಬೆಂಕಿ ಅನಾಹುತ: 5ಕ್ಕೂ ಹೆಚ್ಚು ಅಂಗಡಿಗಳು ಭಸ್ಮ, ಲಕ್ಷಾಂತರ ನಷ್ಟ
November 4, 2020, 8:54 AM

ಬೀದರ್(reporterkarnataka news): ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಭೀಕರ ಬೆಂಕಿ ಆಕಸ್ಮಿಕ ಸಂಭವಿಸಿದೆ. ಬೆಂಕಿ ಅನಾಹುತದಿಂದ ಎಲೆಕ್ಟ್ರಾನಿಕ್ಸ್ ಅಂಗಡಿ ಸೇರಿದಂತೆ ಐದಕ್ಕೂ ಹೆಚ್ಚು ಅಂಗಡಿಗಳು ನಾಶವಾಗಿವೆ.
ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಇಂದು ಮುಂಜಾನೆ 7ಗಂಟೆ ಹೊತ್ತಿಗೆ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.