12:17 AM Sunday29 - November 2020
ಬ್ರೇಕಿಂಗ್ ನ್ಯೂಸ್
ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಕೊಂಚಾಡಿ ಕಾಶೀ ಮಠದಲ್ಲಿ ತುಳಸಿ ಪೂಜೆ: ಪಂಚಾಮೃತ, ಕ್ಷೀರಾಭಿಷೇಕ ಸಂಪನ್ನ ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಹೈದರಾಬಾದ್ ತಲುಪಿದ ಪ್ರಧಾನಿ ಮೋದಿ: ಬಯೋಟೆಕೆ ಸಂಸ್ಥೆಗೆ ಭೇಟಿ, ವಿಜ್ಞಾನಿಗಳ ಜತೆ ಸಮಾಲೋಚನೆ 

ಇತ್ತೀಚಿನ ಸುದ್ದಿ

ಭಾರತವು ವಿಶ್ವಕ್ಕೆ ಆಧ್ಯಾತ್ಮದ ಬೆಳಕು ನೀಡಿದೆ: ಸಂಸದ ನಳಿನ್ ಕಮಾರ್ ಕಟೀಲ್

October 31, 2020, 7:00 PM

ಮಂಗಳೂರು (reporterkarnataka news): ಭಾರತವು ವಿಶ್ವಕ್ಕೆ ಆಧ್ಯಾತ್ಮದ ಬೆಳಕು ನೀಡಿದ ದೇಶ. ವ್ಯಕ್ತಿ ಮತ್ತು ಪ್ರಕೃತಿ ಎರಡರಲ್ಲಿ ದೇವರನ್ನು ಕಂಡಿರುವ ದೇಶ ಇದಾಗಿದೆ. ರಾಮಾಯಾಣದ ಮೂಲಕ ಅಧ್ಯಾತ್ಮವನ್ನು ಪ್ರಪಂಚಕ್ಕೆ ಸಾರಿದ ಮಹಾನ್ ಜ್ಞಾನಿಯೇ ಮಹರ್ಷಿ ವಾಲ್ಮೀಕಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
    ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯ ಸಂಭಾಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ನಿತ್ಯದ ಜೀವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಆದರ್ಶಗಳನ್ನು ಪಾಲಿಸಿಕೊಂಡು ನಾವು ಮುನ್ನಡೆಯಬೇಕು. ಅವರ ಆದರ್ಶಗಳಿಂದ ನಾವು ಸ್ಫೂರ್ತಿ ಪಡೆಯಬಹುದಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ರಾಮಾಯಣವನ್ನು ಧಾರ್ಮಿಕ ಗ್ರಂಥವಾಗಿ ನೋಡದೇ ಅದರಲ್ಲಿರುವ ಅಂಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಆದರ್ಶವಾಗಿ ಪಾಲಿಸಿಕೊಂಡು  ಮುಂದೆ ಸಾಗಬೇಕು. ರಾಮಾಯಣದಲ್ಲಿ ಅನಾದಿ ಕಾಲದಲ್ಲಿ ನಮ್ಮ ಇಂದಿನ ಜೀವನ ಶೈಲಿಯನ್ನು  ತಿಳಿಸಿದ ಮಹಾನ್ ಜ್ಞಾನಿ ಶ್ರೀ ಮಹರ್ಷಿ ವಾಲ್ಮೀಕಿ. ಮನಸ್ಸಿನಲ್ಲಿ ಬದಲಾವಣೆ ಮಾಡಿಕೊಂಡಿರೆ ಎಂತಹ ಮಹಾಕಾವ್ಯಗಳನ್ನು ರಚನೆ ಮಾಡಬಹುದು ಎನ್ನುವುದಕ್ಕೆ ಸ್ವಷ್ಟ ನಿದರ್ಶನವೇ ಅವರು ಎಂದರು.

 ಶಾಸಕ ಡಾ. ಭರತ್ ವೈ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ., ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತಿತರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು