12:24 AM Sunday24 - January 2021
ಬ್ರೇಕಿಂಗ್ ನ್ಯೂಸ್
ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ… ಕಾಸರಗೋಡು: ಮೆಡಿಕಲ್ ಶಾಪ್ ಗೆ ಔಷಧ ಖರೀದಿಸಲು ಬಂದ ವ್ಯಕ್ತಿಯನ್ನು ಗುಂಪೊಂದು ಥಳಿಸಿ… ಕಾಳು ಹಾಕಿ ಕೋಳಿ ಕದಿಯುವ ಭಿಕ್ಷುಕರಿದ್ದಾರೆ ಎಚ್ಚರಿಕೆ: ನಿಮ್ಮ ಮನೆಗೂ ಬಂದಾರು ಜೋಕೆ!… ವಿವಾದಾತ್ಮಕ ವಾಟ್ಸಾಪ್ ಚಾಟ್ : ಮಹಾರಾಷ್ಟ್ರ ಸರಕಾರದಿಂದ ಅರ್ನಾಬ್ ಮತ್ತೆ ಬಂಧನ ಸಾಧ್ಯತೆ ವೈರಲ್ ಆಗುತ್ತಿದೆ ಕೆ.ಎಲ್. ರಾಹುಲ್ – ಆಶಿಕಾ ರಂಗನಾಥ್ ಜೋಡಿಯ ಫೋಟೋ: ನೆಟ್ಟಿಗರಿಂದ… ಗಣರಾಜ್ಯೋತ್ಸವ ದಿನ ಬೆಂಗಳೂರಿನಲ್ಲೂ ನಡೆಯಲಿದೆ ರೈತ- ಕಾರ್ಮಿಕರ ಟ್ರ್ಯಾಕ್ಟರ್ ಪರೇಡ್  ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಕೆಪಿಎಸ್ ಇ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ಬಂಧಿತರಿಂದ 24 ಲಕ್ಷ ರೂ.… ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆಯಿತೇ ರಹಸ್ಯ ಸಭೆ: ಬಿಜೆಪಿಯೊಳಗಿನ ಮುನಿಸು ತಣ್ಣಗಾಗಿಲ್ವೇ? 

ಇತ್ತೀಚಿನ ಸುದ್ದಿ

ಭಾರತ ಬಂದ್ ಗೆ ಸ್ಪಂದಿಸಿದ ಶ್ರೀನಿವಾಸಪುರ: ಅಂಗಡಿ ಮುಂಗಟ್ಟು ಸಂಪೂರ್ಣ ಸ್ತಬ್ದ 

December 8, 2020, 10:14 PM

ಶ್ರೀನಿವಾಸಪುರ(reporterkarnataka news) :  
ಭಾರತ್‌ ಬಂದ್‌ ಕರೆಗೆ ಸ್ಪಂದಿಸಿ ಮಂಗಳವಾರ ಪಟ್ಟಣದಲ್ಲಿ ಸಂಪೂರ್ಣ ಬಂದ್‌ ಆಚರಿಸಲಾಯಿತು.

ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಯಾವುದೇ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಯಲಿಲ್ಲ. ರಾಜ್ಯ ರಸ್ತೆ ಸಾರಿಗೆ ಬಸ್‌ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳು ತೆರೆದಿದ್ದವಾದರೂ ಸಾರ್ವಜನಿಕರು ಅತ್ತ ಕಡೆ ಸುಳಿಯಲಿಲ್ಲ.

    ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಮಾವು ಬೆಳೆಗಾರರ ಸಂಘ, ಹಮಾಲಿ, ಅಂಗನವಾಡಿ, ಕಟ್ಟಡ ಕಾರ್ಮಿಕರ ಸಂಘಟನೆ ಸೇರಿದಂತೆ ಹಲವು ರೈತ ಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿ, ಬಸ್‌ ನಿಲ್ದಾಣದ ಸಮೀಪ ರಸ್ತೆ ತಡೆ ನಡೆಸಿದರು. 

  ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸೂರ್ಯನಾರಾಯಣ, ಉಪಾಧ್ಯಕ್ಷ ಪಾತಕೋಟ ನವೀನ್‌ ಕುಮಾರ್‌, ಜಿಲ್ಲಾ ಸಿಐಟಿಯು ಉಪಾಧ್ಯಕ್ಷೆ ಜಿ.ಈಶ್ವರಮ್ಮ, ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀರಾಮರೆಡ್ಡಿ, ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪರೆಡ್ಡಿ ಪ್ರತಿಭಟನ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರದ ರೈತ ವಿರೋಧಿ ನಿಲುವನ್ನು ಖಂಡಿಸಿದರು. ರೈತರ ಹಿತಕ್ಕೆ ಮಾರಕವಾಗಿರುವ ಕೃಷಿ ತಿದ್ದುಪಡಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿದರು.

  ವಿವಿಧ ಸಂಘಟನೆಗಳ ಮುಖಂಡರಾದ ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ನಂಬಿಹಳ್ಳಿ ಶ್ರೀರಾಮ ರೆಡ್ಡಿ, ಬೈರಾ ರೆಡ್ಡಿ, ಶ್ರೀಧರ್‌, ಹೆಬ್ಬಟ ರಮೇಶ್‌, ನಾಗಭೂಷಣ, ಮರಸನಪಲ್ಲಿ ನಂಜಪ್ಪ, ಆರ್‌.ವೆಂಕಟೇಶ್‌, ಸೈಯದ್‌, ಫಾರೂಕ್‌, ಎನ್‌.ವೀರಪ್ಪರೆಡ್ಡಿ, ಮೂರ್ತಿ, ರಾಧಮ್ಮ,ಮಮತ, ಸುಬ್ರಮಣಿ, ಆಂಜಪ್ಪ, ಶಿವಣ್ಣ, ಮಂಜುನಾಥ್‌ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು