ಇತ್ತೀಚಿನ ಸುದ್ದಿ
ಭಾರತ ತಂಡದ ಮಾಜಿ ಅಗ್ರೆಸಿವ್ ಕಪ್ತಾನನಿಗೆ ಹಾರ್ಟ್ ಅಟ್ಯಾಕ್ ಆಸ್ಪತ್ರೆಗೆ ದಾಖಲು
January 2, 2021, 3:29 PM

ಕೊಲ್ಕತ್ತಾ (Reporter Karnataka Mangalore)
ಭಾರತ ಕ್ರಿಕೆಟ್ ತಂಡಕ್ಕೆ ಹೊಸ ದಿಶೆಯನ್ನು ತಂದುಕೊಟ್ಟ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(48) ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರನ್ನು ಕೊಲ್ಕತ್ತಾದ ವುಡ್ಲ್ಯಾಂಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೋಲ್ಕತಾದ ತನ್ನ ಮನೆಯಲ್ಲಿ ಗಂಗೂಲಿ ಜಿಮ್ ಅಭ್ಯಾಸದಲ್ಲಿ ನಿರತರಾಗಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೇಹಸ್ಥಿತಿ ಸ್ಥಿರವಾಗಿದೆ. ವೈದ್ಯರು ಆಂಜಿಯೋ ಪ್ಲಾಸ್ಟ್ ಮಾಡಲು ಸೂಚಿಸಿದ್ದಾರೆ ಎನ್ನಲಾಗಿದೆ.